ADVERTISEMENT

ಕೋವಿಡ್ ಬಿಕ್ಕಟ್ಟು‌: 2020ರಲ್ಲಿ 4.66 ಲಕ್ಷ ಮನೆಗಳ ಗೃಹ ಪ್ರವೇಶ ಕಷ್ಟ

ಪಿಟಿಐ
Published 23 ಜೂನ್ 2020, 16:16 IST
Last Updated 23 ಜೂನ್ 2020, 16:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಕೋವಿಡ್‌–19ನಿಂದಾಗಿ ಈ ವರ್ಷ 4.66 ಲಕ್ಷ ಮನೆಗಳ ಗೃಹ ಪ್ರವೇಶ ಆಗುವುದು ಬಹುತೇಕ ಅನುಮಾನ ಎಂದು ಆಸ್ತಿ ಸಲಹಾ ಸಂಸ್ಥೆ ಆನಾರ್ಕ್‌ ಹೇಳಿದೆ.

ಉದ್ದೇಶಿತ ಯೋಜನೆಗಳು ಈ ವರ್ಷ ಗ್ರಾಹಕರ ಕೈಸೇರಬೇಕಿತ್ತು. ಆದರೆ, ಕೋವಿಡ್‌ನಿಂದಾಗಿ ಬಹುತೇಕ ರಾಜ್ಯಗಳಲ್ಲಿ ಆರು ತಿಂಗಳವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ.

‘ಗ್ರಾಹಕರು ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ಲಾಕ್‌ಡೌನ್‌ನಿಂದಾಗಿ ಕಳೆದ ಕೆಲವು ತಿಂಗಳಿನಿಂದ ನಿರ್ಮಾಣ ಚಟುವಟಿಕೆಗಳೇ ನಡೆದಿಲ್ಲ. ಈ ಯೋಜನೆಗಳನ್ನು ಪೂರ್ಣಗೊಳಿಸುವ ಅವಧಿಯು ಆರು ತಿಂಗಳವರೆಗೆ ವಿಸ್ತರಣೆಯಾಗಿದೆ’ ಎಂದು ಆನಾರ್ಕ್‌ನ ಅಧ್ಯಕ್ಷ ಅನುಜ್‌ ಪುರಿ ತಿಳಿಸಿದ್ದಾರೆ.

ADVERTISEMENT

ಯೋಜನೆಗಳ ವಿವರ (ನಗರ;ಮನೆ)

ಬೆಂಗಳೂರು;1 ಲಕ್ಷ

ಮುಂಬೈ;1 ಲಕ್ಷ

ದೆಹಲಿ ರಾಜಧಾನಿ ಪ್ರದೇಶ;1 ಲಕ್ಷ

ಪುಣೆ;68,800

ಕೋಲ್ಕತ್ತ;33,850

ಹೈದರಾಬಾದ್;30,500

ಚೆನ್ನೈ;24,650

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.