ADVERTISEMENT

ಹೋಂಡಾ ಸಿಬಿ300ಆರ್‌ ಬೈಕ್‌ ಬುಕಿಂಗ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 17:09 IST
Last Updated 18 ಜನವರಿ 2019, 17:09 IST
ಹೋಂಡಾ ಸಿಬಿ300ಆರ್‌ ಬೈಕ್‌
ಹೋಂಡಾ ಸಿಬಿ300ಆರ್‌ ಬೈಕ್‌   

ಬೆಂಗಳೂರು: ಹೋಂಡಾ ಮೋಟರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಪ್ರವೇಟ್‌ ಲಿಮಿಟೆಡ್‌, ಜಪಾನ್‌ ತಂತ್ರಜ್ಞಾನದ ನೆರವಿನಿಂದ ದೇಶೀಯವಾಗಿ ತಯಾರಿಸಿರುವ, ಆಕರ್ಷಕ ನೋಟದ ‘ಹೋಂಡಾ ಸಿಬಿ300ಆರ್‌’ ಬೈಕ್‌ ಶೀಘ್ರದಲ್ಲಿಯೇ ಭಾರತದ ರಸ್ತೆಗಳ ಮೇಲೆ ಸಂಚರಿಸಲಿದೆ.

ದೇಶದಾದ್ಯಂತ ಇರುವ ಆಯ್ದ ಹೋಂಡಾ ಡೀಲರ್‌ ಶಿಪ್‌ಗಳಲ್ಲಿ ₹ 5 ಸಾವಿರಪಾವತಿಸಿ ಬೈಕ್‌ ಬುಕಿಂಗ್‌ ಮಾಡಬಹುದಾಗಿದೆ.

‘ನಿಯೊ ಸ್ಪೋರ್ಟ್ಸ್‌ ಕೆಫೆ’ ಪರಿಕಲ್ಪನೆಯ ವಿನ್ಯಾಸದ ‘ಸಿಬಿ300ಆರ್‌’ ಬೈಕ್‌ ಅನ್ನು ಭಾರತದಲ್ಲಿಯೇ ತಯಾರಿಸಲಾಗಿದೆ. ಇದರ ಎಕ್ಸ್‌ಷೋರೂಂ ಬೆಲೆ ₹ 2.5 ಲಕ್ಷಕ್ಕಿಂತ ಕಡಿಮೆ ಇರಲಿದೆ.

ADVERTISEMENT

‘ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಬೈಕ್‌, ಸವಾರರಿಗೆ ರೋಚಕ ಅನುಭವ ನೀಡಲಿದೆ. 286 ಸಿಸಿ ಸಾಮರ್ಥ್ಯದ, ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಬೈಕ್‌ ವಿಶ್ವದಾದ್ಯಂತ ಸವಾರರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯದ್ವಿಂದರ್‌ ಸಿಂಗ್‌ ಗುಲೇರಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.