ADVERTISEMENT

ಹೋಂಡಾ ಸಿವಿಕ್ ಡೀಸೆಲ್‌ ಮಾರುಕಟ್ಟೆಗೆ: ಬೆಲೆ, ವಿಶೇಷತೆ ಮಾಹಿತಿ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 3:06 IST
Last Updated 13 ಜುಲೈ 2020, 3:06 IST
ಡೀಸೆಲ್ ಚಾಲಿತ ಬಿಎಸ್‌6 ಹೋಂಡಾ ಸಿವಿಕ್‌
ಡೀಸೆಲ್ ಚಾಲಿತ ಬಿಎಸ್‌6 ಹೋಂಡಾ ಸಿವಿಕ್‌   

ಪ್ರೀಮಿಯಂ ಕಾರ್‌ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ ಇಂಡಿಯಾ (HCIL), ತನ್ನ ಡೀಸೆಲ್ ಚಾಲಿತ ಬಿಎಸ್‌6 ಸೆಡಾನ್‌ ಹೋಂಡಾ ಸಿವಿಕ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಎರಡು ಮಾದರಿಗಳಲ್ಲಿ ಲಭ್ಯ ಇದೆ.

ವಿಶ್ವದಾದ್ಯಂತ ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗುವ ಸೆಡಾನ್ ಹೋಂಡಾ ಸಿವಿಕ್‌ನ ಡೀಸೆಲ್‌ ಅವತರಣಿಕೆಯು ಈಗ ದೇಶಿ ಮಾರುಕಟ್ಟೆಗೆ ಬಿಡುಗಡೆ ಆಗಿರುವುದರಿಂದ ಕಂಪನಿಯ ವಾಹನಗಳೆಲ್ಲ ಈಗ ಪೆಟ್ರೋಲ್‌ ಮತ್ತು ಡೀಸೆಲ್‌ ಮಾದರಿಯಲ್ಲಿ ಲಭ್ಯ ಇರುವಂತಾಗಿದೆ. ಪೆಟ್ರೋಲ್ ಮಾದರಿಯು 2019ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿತ್ತು.

’1.6 ಲೀಟರ್‌ ಟರ್ಬೊ ಎಂಜಿನ್‌, 6–ಸ್ಪೀಡ್‌ ಮ್ಯಾನುಯಲ್ ಟ್ರಾನ್ಸ್‌ಮಿಷನ್‌ ಹೊಂದಿರುವ ಸಿವಿಕ್‌, ವಿಶಿಷ್ಟ ಚಾಲನಾ ಅನುಭವ ನೀಡಲಿದೆ. ಆಕರ್ಷಕ ವಿನ್ಯಾಸ, ಸುಂದರ ಇಂಟೀರಿಯರ್‌, ಹೊಸ ತಂತ್ರಜ್ಞಾನ ಮತ್ತು ಸೌಲಭ್ಯ ಒಳಗೊಂಡಿರುವ ಸಿವಿಕ್‌, ಗ್ರಾಹಕರಿಗೆ ಅತ್ಯುತ್ತಮ ಡ್ರೈವಿಂಗ್ ಅನುಭವವನ್ನೂ ಒದಗಿಸುತ್ತದೆ. ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಕಂಪನಿಯು ಬದ್ಧವಾಗಿದೆ‘ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ರಾಜೇಶ್‌ ಗೋಯಲ್‌ ಹೇಳಿದ್ದಾರೆ.

ADVERTISEMENT

10 ನೇ ತಲೆಮಾರಿನ ಹೋಂಡಾ ಸಿವಿಕ್, ದೇಶಿ ರಸ್ತೆಯಲ್ಲಿ ಸಂಚರಿಸುವ ಆಕರ್ಷಕ ವಿನ್ಯಾಸದ ಸೆಡಾನ್‌ ಆಗಿ ಗಮನ ಸೆಳೆಯುತ್ತಿದೆ. ಪ್ರತಿ ಲೀಟರ್‌ಗೆ 23.9 ಕಿ.ಮೀ ಕ್ರಮಿಸುವ ಇಂಧನ ಕ್ಷಮತೆ ಹೊಂದಿದೆ.

ಹೊರ ನೋಟ ಆಕರ್ಷಕವಾಗಿರುವಂತೆ, ಒಳ ಭಾಗವೂ ಗಮನ ಸೆಳೆಯುವ ರೀತಿಯಲ್ಲಿ ವಿಶಾಲ ಸ್ಥಳಾವಕಾಶ ಹೊಂದಿದೆ. ಅತ್ಯಾಧುನಿಕ ಮತ್ತು ದುಬಾರಿ ಕಾಕ್‌ಪಿಟ್ ಡಿಸೈನ್‌ ಒಳಗೊಂಡಿದೆ. ಶ್ರೇಷ್ಠ ಗುಣಮಟ್ಟದ ಸಾಫ್ಟ್-ಟಚ್ ಮಟೀರಿಯಲ್ಸ್ ಬಳಸಲಾಗಿದೆ.

ವಿಶೇಷತೆಗಳು
17.7 ಸೆಂಟಿಮೀಟರ್‌ ಟಚ್‌ಸ್ಕ್ರೀನ್ ಇನ್‌ಫೊಟೇನ್‌ಮೆಂಟ್ ಸಿಸ್ಟಮ್
ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೊ
ಎಲೆಕ್ಟ್ರಿಕ್ ಸನ್‌ರೂಫ್‌
ಎಲೆಕ್ಟ್ರಿಕ್‌ ಪಾರ್ಕಿಂಗ್‌ ಬ್ರೇಕ್‌
ಮಲ್ಟಿ ಆ್ಯಂಗಲ್‌ ರೇರ್‌ ವ್ಯೂ ಕ್ಯಾಮೆರಾ
6 ಏರ್‌ಬ್ಯಾಗ್‌

ಬೆಲೆ (ದೆಹಲಿ ಎಕ್ಸ್-ಷೋರೂಂ)
ವಿಕ್ಸ್‌ ಎಂಟಿ ₹ 20,74,900
ಜೆಡ್‌ಎಕ್ಸ್‌ ಎಂಟಿ ₹ 22,34,900

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.