ADVERTISEMENT

ಗೃಹ ಹಣಕಾಸು ಸಂಸ್ಥೆಗಳಪ್ರಗತಿ ಕುಂಠಿತ ಸಾಧ್ಯತೆ

ಪಿಟಿಐ
Published 24 ಮಾರ್ಚ್ 2019, 20:00 IST
Last Updated 24 ಮಾರ್ಚ್ 2019, 20:00 IST

ಮುಂಬೈ: ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳು ಎದುರಿಸುತ್ತಿರುವ ನಗದು ಕೊರತೆ ಬಿಕ್ಕಟ್ಟು ಪರಿಸ್ಥಿತಿಯು ಮುಂದಿನ ಹಣಕಾಸು ವರ್ಷದಲ್ಲಿಯೂ ಸುಧಾರಣೆಯಾಗುವ ಸಾಧ್ಯತೆ ಕ್ಷೀಣವಾಗಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ (2018–19) ಸಾಲ ನೀಡಿಕೆ ಪ್ರಮಾಣವು ಶೇ 13 ರಿಂದ ಶೇ 15ರಷ್ಟು ಪ್ರಗತಿ ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿಯೂ ಇದು ಶೇ 14 ರಿಂದ ಶೇ 16ರಷ್ಟೇ ಇರಲಿದೆ ಎದು ರೇಟಿಂಗ್‌ ಸಂಸ್ಥೆ ‘ಇಕ್ರಾ’ (ಐಸಿಆರ್‌ಎ) ವರದಿಯಲ್ಲಿ ತಿಳಿಸಲಾಗಿದೆ.

ಗೃಹ ಸಾಲಕ್ಕೆ ಸಂಬಂಧಿಸಿದಂತೆ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಅಲ್ಪಾವಧಿಯಲ್ಲಿ ಸದ್ಯದ ಶೇ 1.4ರಿಂದ ಶೇ 1.8ಕ್ಕೆ ಹೆಚ್ಚಳಗೊಳ್ಳಲಿದೆ.

ADVERTISEMENT

‘ಮನೆ ಖರೀದಿದಾರರಿಗೆ ಸಾಲ ನೀಡಿರುವ ಬಹುತೇಕ ಪ್ರಕರಣಗಳಲ್ಲಿ ನಿರ್ಮಾಣ ಹಂತದಲ್ಲಿ ಇರುವ ವಸತಿ ಯೋಜನೆಗಳು ಗಮನಾರ್ಹವಾಗಿ ವಿಳಂಬವಾಗುತ್ತಿವೆ. ನಿರ್ಮಾಣ ಪ್ರಗತಿ ಆಧರಿಸಿ ಬ್ಯಾಂಕ್‌ಗಳು ಸಾಲದ ಮೊತ್ತ ಬಿಡುಗಡೆ ಮಾಡುವ ವ್ಯವಸ್ಥೆ ಇರುವುದು ಯೋಜನೆಗಳ ಪ್ರಗತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ’ ಎಂದು ‘ಇಕ್ರಾ’ದ ಉಪಾಧ್ಯಕ್ಷ ಸುಪ್ರಜೀತ್‌ ನಿಜ್ಜರ್‌ ಹೇಳಿದ್ದಾರೆ.

ಮೂಲ ಸೌಕರ್ಯ ಯೋಜನೆಗಳಿಗೆ ದೀರ್ಘಾವಧಿಗೆ ಸಾಲ ನೀಡುವ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ನಲ್ಲಿ 2018ರ ಸೆಪ್ಟೆಂಬರ್‌ನಲ್ಲಿ ಹಣಕಾಸು ಬಿಕ್ಕಟ್ಟು ಉದ್ಭವಿಸಿದ ನಂತರ ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳ ಸಾಲ ನೀಡಿಕೆ ಪ್ರಮಾಣ ಕುಂಠಿತಗೊಂಡಿದೆ.

ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‌, ಗೃಹ ಹಣಕಾಸು ಸಂಸ್ಥೆಗಳ ಅನುಕೂಲಕ್ಕಾಗಿ ಕನಿಷ್ಠ ಬಂಡವಾಳ ಮೀಸಲು ಪ್ರಮಾಣ, ಠೇವಣಿ ಸಂಗ್ರಹ ಮತ್ತು ಸಾಲ ಸಂಗ್ರಹದ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿರುವುದರಿಂದ ಪರಿಸ್ಥಿತಿ ಸುಧಾರಿಸಬಹುದು ಎಂದು ‘ಇಕ್ರಾ’ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.