
ಪಿಟಿಐ
ನವದೆಹಲಿ: ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಮನೆಗಳ ಮಾರಾಟ ಪ್ರಮಾಣವು ದೇಶದ ಪ್ರಮುಖ 9 ನಗರಗಳಲ್ಲಿ ಶೇಕಡ 16ರಷ್ಟು ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ರಿಯಲ್ ಎಸ್ಟೇಟ್ ದತ್ತಾಂಶ ವಿಶ್ಲೇಷಣಾ ಕಂಪನಿ ಪ್ರಾಪ್‌ಈಕ್ವಿಟಿ ಹೇಳಿದೆ.
ಬೇಡಿಕೆ ಕಡಿಮೆ ಆಗಿರುವುದು ಹಾಗೂ ಹೊಸ ಮನೆಗಳ ನಿರ್ಮಾಣವು ಕಡಿಮೆ ಆಗಿರುವುದು ಮಾರಾಟ ಇಳಿಕೆಗೆ ಕಾರಣ ಎಂದು ಅದು ಹೇಳಿದೆ.
2021ರ ಜುಲೈ–ಸೆಪ್ಟೆಂಬರ್ ಅವಧಿಯ ನಂತರ ಇದು ಅತ್ಯಂತ ಕಡಿಮೆ ಪ್ರಮಾಣದ ಮಾರಾಟ ಆಗಲಿದೆ ಎಂದು ಕೂಡ ಹೇಳಿದೆ.
ಈ ವರ್ಷದ ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ 9 ಪ್ರಮುಖ ನಗರಗಳಲ್ಲಿ ಮನೆಗಳ ಮಾರಾಟವು 98,019ಕ್ಕೆ ಇಳಿದಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 1.16 ಲಕ್ಷದಷ್ಟಿತ್ತು ಎಂದು ಪ್ರಾಪ್‌ಈಕ್ವಿಟಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.