ADVERTISEMENT

ವಸತಿ ಮಾರಾಟ ಶೇ 30ರಷ್ಟು ಹೆಚ್ಚಳ ನಿರೀಕ್ಷೆ

ಪಿಟಿಐ
Published 19 ಆಗಸ್ಟ್ 2021, 15:27 IST
Last Updated 19 ಆಗಸ್ಟ್ 2021, 15:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈ ವರ್ಷದಲ್ಲಿ ವಸತಿ ಮಾರಾಟವು ಪ್ರಮುಖ ಎಂಟು ನಗರಗಳಲ್ಲಿ ಶೇಕಡ 30ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಬೇಡಿಕೆಯು ಕೋವಿಡ್‌ಗೂ ಮುಂಚಿನ ಮಟ್ಟಕ್ಕಿಂತ ಕಡಿಮೆಯೇ ಇರಲಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್‌ ಹೇಳಿದೆ.

ಬೆಂಗಳೂರು ಒಳಗೊಂಡಂತೆ ಪ್ರಮುಖ ಎಂಟು ನಗರಗಳಲ್ಲಿ 2020ರಲ್ಲಿ ಒಟ್ಟಾರೆ 1.38 ಲಕ್ಷ ವಸತಿ ಆಸ್ತಿಗಳು ಮಾರಾಟ ಆಗಿದ್ದವು. ಇದಕ್ಕೆ ಹೋಲಿಸಿದರೆ 2021ರಲ್ಲಿ ಒಟ್ಟಾರೆ 1.79 ಲಕ್ಷ ವಸತಿ ಆಸ್ತಿಗಳು ಮಾರಾಟ ಆಗಲಿವೆ ಎಂದು ಸಂಸ್ಥೆ ಹೇಳಿದೆ. 2019ರಲ್ಲಿ ಆಗಿದ್ದ ಮಾರಾಟವು 2.61 ಲಕ್ಷ ಇತ್ತು.

2017ರಿಂದ ವಸತಿ ವಲಯವು ಚೇತರಿಕೆ ಹಾದಿಯಲ್ಲಿತ್ತು. 2019ರಲ್ಲಿ ಬೆಳವಣಿಗೆಯ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಕೋವಿಡ್‌ನಿಂದಾಗಿ ಹಳಿ ತಪ್ಪಿತು. ಹಾಗಾಗದೇ ಇದ್ದಿದ್ದರೆ 2020ರಲ್ಲಿ ವಸತಿ ವಲಯದ ಬೆಳವಣಿಗೆಯು ಗರಿಷ್ಠ ಮಟ್ಟಕ್ಕೆ ಏರಿಕೆ ಆಗುತ್ತಿತ್ತು ಎಂದು ಅನರಾಕ್‌ ಸಂಸ್ಥೆಯ ಅಧ್ಯಕ್ಷ ಅನುಜ್‌ ಪುರಿ ಹೇಳಿದ್ಧಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.