ADVERTISEMENT

ದೇಶದಲ್ಲೇ ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌ ತಯಾರಿಕೆ: ಎಚ್‌ಪಿ

ಪಿಟಿಐ
Published 22 ಡಿಸೆಂಬರ್ 2021, 16:10 IST
Last Updated 22 ಡಿಸೆಂಬರ್ 2021, 16:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಎಚ್‌ಪಿ ಕಂಪನಿಯು ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌ ಮತ್ತು ಮಾನಿಟರ್‌ಗಳನ್ನು ಭಾರತದಲ್ಲಿಯೇ ತಯಾರಿಸಲು ಆರಂಭಿಸಿರುವುದಾಗಿ ಬುಧವಾರ ತಿಳಿಸಿದೆ.

ಚೆನ್ನೈನ ಶ್ರೀಪೆರಂಬದೂರಿನಲ್ಲಿ ಇರುವ ‘ಫ್ಲೆಕ್ಸ್‌’ ಘಟಕದಲ್ಲಿ ತಯಾರಿಕೆ ಆರಂಭಿಸಲಾಗಿದೆ. ಕೆಲವು ಉತ್ಪನ್ನಗಳು ಸರ್ಕಾರಿ ಇಲಾಖೆಗಳು ಹಾಗೂ ಇತರೆ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಸರ್ಕಾರಿ ಇ-ಮಾರುಕಟ್ಟೆ (ಜಿಇಎಂ) ಪೋರ್ಟಲ್‌ನಲ್ಲಿ ಲಭ್ಯವಿರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ದೇಶದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದಾಗಿನಿಂದ ಕಂಪನಿಯು ಭಾರತದೊಂದಿಗೆ ನಿಕಟವಾದ ಪಾಲುದಾರಿಕೆಯನ್ನು ಹೊಂದುತ್ತಾ ಬಂದಿದೆ. ಸ್ಥಳೀಯವಾಗಿ ತಯಾರಿಕೆಗೆ ಆದ್ಯತೆ ನೀಡುವ ಮೂಲಕ ಆತ್ಮನಿರ್ಭರ ಭಾರತದ ಗುರಿಯನ್ನು ಈಡೇರಿಸುವಲ್ಲಿ ಅರ್ಥಪೂರ್ಣವಾದ ಪಾತ್ರ ವಹಿಸುವ ವಿಶ್ವಾಸ ಹೊಂದಲಾಗಿದೆ’ ಕಂಪನಿ ಹೇಳಿದೆ. ಎಚ್‌ಪಿ ಎಲೈಟ್‌ಬುಕ್ಸ್‌, ಎಚ್‌ಪಿ ಪ್ರೊಬುಕ್ಸ್‌ ಮತ್ತು ಎಚ್‌ಪಿ ಜಿ8 ಸರಣಿಯ ನೋಟ್‌ಬುಕ್‌ಗಳು ಸ್ಥಳೀಯವಾಗಿ ತಯಾರಾಗಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.