ADVERTISEMENT

₹15 ಕೋಟಿ ಜಿಎಸ್‌ಟಿ ಬಾಕಿ: ಹುಂಡೈಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 14:24 IST
Last Updated 1 ಮಾರ್ಚ್ 2025, 14:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಹುಂಡೈ ಮೋಟರ್‌ ಇಂಡಿಯಾ ಕಂಪನಿಗೆ ₹15 ಕೋಟಿ ಜಿಎಸ್‌ಟಿ ಬಾಕಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿದೆ.

ತಮಿಳುನಾಡಿನ ಕೇಂದ್ರ ಜಿಎಸ್‌ಟಿ ವಿಭಾಗದ ಹೆಚ್ಚುವರಿ ಆಯುಕ್ತರಿಂದ ನೋಟಿಸ್ ಸ್ವೀಕರಿಸಲಾಗಿದೆ. 2020–21ರಿಂದ 2021–2022ರ ವರೆಗೆ ನಿಗದಿಪಡಿಸಿದ್ದ ತೆರಿಗೆಗಿಂತ ಕಡಿಮೆ ಪಾವತಿಸಿರುವ ಬಗ್ಗೆ ತಿಳಿಸಲಾಗಿದೆ. ಈ ಮೊತ್ತದಲ್ಲಿ ₹1.34 ಕೋಟಿ ದಂಡವೂ ಸೇರಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ಈ ನೋಟಿಸ್‌ನಿಂದ ಕಂಪನಿಯ ಹಣಕಾಸು, ಕಾರ್ಯಾಚರಣೆ ಮತ್ತು ಇತರೆ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕುರಿತು ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.