ADVERTISEMENT

ಐಸಿಐಸಿಐ ಬ್ಯಾಂಕ್‌ ಲಾಭ ಶೇ 3.2ರಷ್ಟು ಏರಿಕೆ

ಪಿಟಿಐ
Published 18 ಅಕ್ಟೋಬರ್ 2025, 14:24 IST
Last Updated 18 ಅಕ್ಟೋಬರ್ 2025, 14:24 IST
ಯಾದಗಿರಿಯ ಐಸಿಐಸಿಐ ಬ್ಯಾಂಕ್‌ ಸಿಬ್ಬಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದರಿಂದ ಬ್ಯಾಂಕ್‌ ಅನ್ನು ಸೀಲ್‌ಡೌನ್‌ ಮಾಡಿ ಸ್ಯಾನಿಟೈಸ್‌ ಮಾಡಲಾಯಿತು
ಯಾದಗಿರಿಯ ಐಸಿಐಸಿಐ ಬ್ಯಾಂಕ್‌ ಸಿಬ್ಬಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದರಿಂದ ಬ್ಯಾಂಕ್‌ ಅನ್ನು ಸೀಲ್‌ಡೌನ್‌ ಮಾಡಿ ಸ್ಯಾನಿಟೈಸ್‌ ಮಾಡಲಾಯಿತು   

ಮುಂಬೈ: ಐಸಿಐಸಿಐ ಬ್ಯಾಂಕ್‌ನ ಸೆಪ್ಟೆಂಬರ್‌ ತ್ರೈಮಾಸಿಕದ ಒಟ್ಟು ಲಾಭವು ಶೇ 3.2ರಷ್ಟು ಹೆಚ್ಚಾಗಿ ₹13,357 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹12,948 ಕೋಟಿ ಲಾಭ ಆಗಿತ್ತು.

ಬ್ಯಾಂಕ್‌ನ ನಿವ್ವಳ ಬಡ್ಡಿ ವರಮಾನವು (ಎನ್‌ಐಎಂ) ಶೇ 7.4ರಷ್ಟು ಹೆಚ್ಚಾಗಿ ₹21,529 ಕೋಟಿಗೆ ತಲುಪಿದೆ. ಸಾಲ ನೀಡಿಕೆಯು ಶೇ 10.6ರಷ್ಟು ಹೆಚ್ಚಳ ಕಂಡಿದ್ದುದು ಎನ್‌ಐಎಂ ಏರಿಕೆಗೆ ನೆರವಾಗಿದೆ.

ಠೆವಣಿ ಸಂಗ್ರಹವು ಶೇ 9.1ರಷ್ಟು ಏರಿಕೆ ಕಂಡಿದೆ. ಒಟ್ಟು ಅನುತ್ಪಾದಕ ಸಾಲಗಳ ಪ್ರಮಾಣವು ಶೇ 1.58ಕ್ಕೆ ಕುಸಿದಿದೆ. ಇದು ಜೂನ್‌ ತ್ರೈಮಾಸಿಕದಲ್ಲಿ ಶೇ 1.67ರಷ್ಟು ಇತ್ತು. ಹಿಂದಿನ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಇದು ಶೇ 1.97ರಷ್ಟು ಇತ್ತು.

ADVERTISEMENT

ಸೆಪ್ಟೆಂಬರ್‌ 30ಕ್ಕೆ ಬ್ಯಾಂಕ್‌ನ ನಗದು ಮೀಸಲು ಅನುಪಾತವು ಶೇ 17.31ರಷ್ಟು ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.