ADVERTISEMENT

ಐಸಿಐಸಿಐ ಬ್ಯಾಂಕ್‌: ಉಳಿತಾಯ ಖಾತೆ ಬಡ್ಡಿ ಇಳಿಕೆ

ಪಿಟಿಐ
Published 16 ಏಪ್ರಿಲ್ 2025, 14:39 IST
Last Updated 16 ಏಪ್ರಿಲ್ 2025, 14:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ದೇಶದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್‌ ಆದ ಐಸಿಐಸಿಐ ಬ್ಯಾಂಕ್‌, ಉಳಿತಾಯ ಖಾತೆ ಠೇವಣಿ ಮೇಲಿನ ಬಡ್ಡಿದರವನ್ನು ಶೇ 0.25ರಷ್ಟು ಕಡಿತಗೊಳಿಸಿದೆ. 

ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರ ಕಡಿತಗೊಳಿಸಿದ ಬೆನ್ನಲ್ಲೇ ಬ್ಯಾಂಕ್‌ಗಳು ಠೇವಣಿ ಮೇಲಿನ ಬಡ್ಡಿದರ ಕಡಿತಕ್ಕೆ ಮುಂದಾಗಿವೆ. ಇತ್ತೀಚೆಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಕೂಡ ಉಳಿತಾಯ ಖಾತೆಯ ಬಡ್ಡಿದರವನ್ನು ಕಡಿತಗೊಳಿಸಿದೆ. 

ಐಸಿಐಸಿಐ ಬ್ಯಾಂಕ್‌ನ ಉಳಿತಾಯ ಖಾತೆದಾರರ ₹50 ಲಕ್ಷದವರೆಗಿನ ಮೊತ್ತಕ್ಕೆ ಶೇ 2.75ರಷ್ಟು ಹಾಗೂ ₹50 ಲಕ್ಷಕ್ಕಿಂತ ಹೆಚ್ಚು ಮೊತ್ತಕ್ಕೆ ಶೇ 3.25ರಷ್ಟು ಬಡ್ಡಿ ನಿಗದಿಪಡಿಸಲಾಗಿದೆ. 

ADVERTISEMENT

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು (ಎಸ್‌ಬಿಐ) ಉಳಿತಾಯ ಖಾತೆಯಲ್ಲಿನ ಮೊತ್ತಕ್ಕೆ ಶೇ 2.70ರಷ್ಟು ಬಡ್ಡಿ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.