ADVERTISEMENT

ತೆರಿಗೆ ಬಾಕಿ: ಐಸಿಐಸಿಐ ವಿಮಾ ಕಂಪನಿಗೆ ನೋಟಿಸ್‌ ಜಾರಿ

ಪಿಟಿಐ
Published 29 ಮಾರ್ಚ್ 2025, 12:35 IST
Last Updated 29 ಮಾರ್ಚ್ 2025, 12:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2023–24ನೇ ಮೌಲ್ಯಮಾಪನ ವರ್ಷದಲ್ಲಿನ ₹328 ಕೋಟಿ ತೆರಿಗೆ ಬಾಕಿಗೆ ಸಂಬಂಧಿಸಿದಂತೆ ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.

ಮಹಾರಾಷ್ಟ್ರದ ಸಹಾಯಕ ತೆರಿಗೆ ಆಯುಕ್ತರು ಈ ನೋಟಿಸ್‌ ನೀಡಿದ್ದಾರೆ ಎಂದು ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.

ಇತರೆ ಮೂಲಗಳಿಂದ ಮಧ್ಯಸ್ಥಗಾರರು ಗಳಿಸಿದ ಆದಾಯ, ಮಾರುಕಟ್ಟೆ ಮತ್ತು ಜಾಹೀರಾತು ವೆಚ್ಚಕ್ಕೆ ಸಂಬಂಧಿಸಿದ ಆದಾಯ ಕುರಿತು ನೋಟಿಸ್‌ ನೀಡಲಾಗಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.