
ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ, ಭಾರತದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರದ ಅಂದಾಜನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪರಿಷ್ಕರಿಸಿದೆ. ಈ ಬಾರಿ ಬೆಳವಣಿಗೆ ದರವು ಶೇ 7.3ರಷ್ಟು ಇರಲಿದೆ ಎಂದು ಅದು ಹೇಳಿದೆ. ಇದು ಈ ಮೊದಲಿನ ಅಂದಾಜಿಗಿಂತ ಶೇ 0.7ರಷ್ಟು ಹೆಚ್ಚು.
ಅರ್ಥ ವ್ಯವಸ್ಥೆಯ ಸ್ಥಿತಿಯು ನಿರೀಕ್ಷೆಗಿಂತ ಹೆಚ್ಚು ಉತ್ತಮವಾಗಿದೆ. ಇದು ಅಂದಾಜನ್ನು ಪರಿಷ್ಕರಿಸಿರುವುದಕ್ಕೆ ಕಾರಣ ಎಂದು ಐಎಂಎಫ್ ಹೇಳಿದೆ.
2026–27ರಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 6.4ರಷ್ಟು ಇರಲಿದೆ ಎಂದು ಕೂಡ ಐಎಂಎಫ್ ಅಂದಾಜು ಮಾಡಿದೆ. ಐಎಂಎಫ್‌ನ ಈ ಮೊದಲಿನ ಅಂದಾಜಿನಲ್ಲಿ 2026–27ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ 6.2ರಷ್ಟು ಇರಲಿದೆ ಎಂದು ಹೇಳಿತ್ತು.
ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಸಿದ್ಧಪಡಿಸಿರುವ ಮೊದಲ ಮುಂಗಡ ಅಂದಾಜಿನ ಪ್ರಕಾರ, ಈ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ 7.4ರಷ್ಟು ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.