ನವದೆಹಲಿ: ಅದಾನಿ ಸಮೂಕದ ಸಿಮೆಂಟ್ ತಯಾರಿಕಾ ಸಂಸ್ಥೆ ಎಸಿಸಿ ಲಿಮಿಟೆಡ್‌ಗೆ ಆದಾಯ ತೆರಿಗೆ (ಐ-ಟಿ) ಇಲಾಖೆಯು ಒಟ್ಟು ₹23.07 ಕೋಟಿಯಷ್ಟು ಎರಡು ಪ್ರತ್ಯೇಕ ದಂಡಗಳನ್ನು ವಿಧಿಸಿದೆ.
ಇದನ್ನು ಮೇಲ್ಮನವಿ ಪ್ರಾಧಿಕಾರದ ಮುಂದೆ ಅದಾನಿ ಸಮೂಹ ಪ್ರಶ್ನಿಸುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.
2015-16ರ ಮೌಲ್ಯಮಾಪನ ವರ್ಷದಲ್ಲಿ ‘ಆದಾಯದ ತಪ್ಪು ವಿವರಗಳನ್ನು ಸಲ್ಲಿಸಿದ್ದಕ್ಕಾಗಿ ಐಟಿ ಇಲಾಖೆಯು ₹14.22 ಕೋಟಿ ದಂಡ ವಿಧಿಸಿದೆ.
2018-19ರ ಮೌಲ್ಯಮಾಪನ ವರ್ಷದ ಆದಾಯವನ್ನು ಕಡಿಮೆ ತೋರಿಸಿದ್ದಕ್ಕಾಗಿ ₹8.85 ಕೋಟಿ ದಂಡವನ್ನು ವಿಧಿಸಿದೆ.
‘ಕಂಪನಿಯು ನಿಗದಿತ ಸಮಯದೊಳಗೆ ಆದಾಯ ತೆರಿಗೆ ಆಯುಕ್ತರ ಮುಂದೆ ಮೇಲ್ಮನವಿ ಸಲ್ಲಿಸುವ ಮೂಲಕ ಎರಡೂ ಆದೇಶಗಳನ್ನು ಪ್ರಶ್ನಿಸಲಿದೆ. ದಂಡಕ್ಕೆ ತಡೆಯಾಜ್ಞೆ ಕೋರಲಿದೆ ಎಂದು ಎಸಿಸಿ ಗುರುವಾರ ತಿಳಿಸಿದೆ.
ಕಂಪನಿಯು ಈ ಎರಡು ದಂಡಗಳ ಆದೇಶ ಪ್ರತಿಯನ್ನು ಅಕ್ಟೋಬರ್ 1 ರಂದು ಸ್ವೀಕರಿಸಿದ್ದು, ಈ ದಂಡಗಳು ಕಂಪನಿಯ ಹಣಕಾಸಿನ ಚಟುವಟಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.