ADVERTISEMENT

ಸಮಾನತೆಯ ಸೂಚ್ಯಂಕದಲ್ಲಿ ಭಾರತಕ್ಕೆ 4ನೇ ಸ್ಥಾನ

ಪಿಟಿಐ
Published 6 ಜುಲೈ 2025, 19:20 IST
Last Updated 6 ಜುಲೈ 2025, 19:20 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

–ಎ.ಐ ಚಿತ್ರ

ನವದೆಹಲಿ: 2011–12ರಿಂದ 2022–23ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಅಸಮಾನತೆಯು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದ್ದು, ಭಾರತವು ಈಗ ವಿಶ್ವದಲ್ಲಿ ‘ಸಮಾನತೆಯು ಹೆಚ್ಚು ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನ ಪಡೆದಿದೆ’ ಎಂದು ವಿಶ್ವ ಬ್ಯಾಂಕ್‌ನ ವರದಿಯೊಂದು ಹೇಳಿದೆ. 

ADVERTISEMENT

ಕಳೆದ ಒಂದು ದಶಕದ ಅವಧಿಯಲ್ಲಿ ಕೈಗೊಂಡ ಹಲವು ಕ್ರಮಗಳು ಹಾಗೂ ಯೋಜನೆಗಳ ಪರಿಣಾಮವಾಗಿ ಅಸಮಾನತೆಯು ಕಡಿಮೆ ಆಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಮಾನತೆಯ ಸೂಚ್ಯಂಕದಲ್ಲಿ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿ ಇರುವ ಮೂರು ರಾಷ್ಟ್ರಗಳೆಂದರೆ ಸ್ಲೋವಾಕ್ ಗಣರಾಜ್ಯ, ಸ್ಲೊವೇನಿಯಾ ಮತ್ತು ಬೆಲಾರುಸ್. ಚೀನಾ, ಅಮೆರಿಕ ಮತ್ತು ಬ್ರಿಟನ್‌ಗಿಂತ ಭಾರತದ ಸ್ಥಿತಿ ಉತ್ತಮವಾಗಿದೆ.

‘ಭಾರತವು ಸೂಚ್ಯಂಕದಲ್ಲಿ 25.5 ಅಂಕ ಗಳಿಸಿದೆ. ವಿಶ್ವದಲ್ಲಿ ಅತ್ಯಂತ ಹೆಚ್ಚು ಸಮಾನತೆ ಇರುವ ನಾಲ್ಕನೆಯ ದೇಶವಾಗಿದೆ’ ಎಂದು ವಿಶ್ವ ಬ್ಯಾಂಕ್‌ ವರದಿ ಉಲ್ಲೇಖಿಸಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸೂಚ್ಯಂಕದಲ್ಲಿ ಚೀನಾ 35.7 ಅಂಕ, ಅಮೆರಿಕ 41.8 ಅಂಕ ಪಡೆದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.