ADVERTISEMENT

ದೇಶದ ಕಾಫಿ ರಫ್ತು ಶೇ 4.47ರಷ್ಟು ಇಳಿಕೆ

ಪಿಟಿಐ
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
   

ನವದೆಹಲಿ: 2025ರ ಕ್ಯಾಲೆಂಡರ್‌ ವರ್ಷದಲ್ಲಿ ದೇಶದ ಕಾಫಿ ರಫ್ತು ಶೇ 4.47ರಷ್ಟು ಇಳಿದಿದ್ದು 3.84 ಲಕ್ಷ ಟನ್‌ ಆಗಿದೆ. ಆದರೆ ಮೌಲ್ಯದ ಲೆಕ್ಕದಲ್ಲಿ ಶೇ 22.50ರಷ್ಟು ಹೆಚ್ಚಳ ಕಂಡು ಸರಿಸುಮಾರು ₹18,850 ಕೋಟಿ ಆಗಿದೆ.

2024ರಲ್ಲಿ ಒಟ್ಟು 4.02 ಲಕ್ಷ ಟನ್ ಕಾಫಿ ರಫ್ತಾಗಿತ್ತು. ಕಾಫಿ ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ ಏಳನೆಯ ಸ್ಥಾನದಲ್ಲಿದೆ, ಕಾಫಿ ರಫ್ತಿನಲ್ಲಿ ಐದನೆಯ ಸ್ಥಾನದಲ್ಲಿದೆ.

ಕಾಫಿ ಮಂಡಳಿಯ ಬಳಿ ಇರುವ ಅಂಕಿ–ಅಂಶಗಳ ಪ್ರಕಾರ ಅರೇಬಿಕಾ ಕಾಫಿ ರಫ್ತು ಶೇ 65ರಷ್ಟು ಕಡಿಮೆ ಆಗಿದ್ದು, 15,607 ಟನ್‌ಗೆ ತಲುಪಿದೆ. ಇದು 2024ರಲ್ಲಿ 44,315 ಟನ್‌ ಆಗಿತ್ತು. ರೊಬಸ್ಟಾ ಕಾಫಿ ರಫ್ತು ಕೂಡ ಶೇ 13ರಷ್ಟು ಕಡಿಮೆ ಆಗಿ 1.80 ಲಕ್ಷ ಟನ್‌ಗೆ ತಲುಪಿದೆ. ಇದು 2025ರಲ್ಲಿ 2.07 ಲಕ್ಷ ಟನ್‌ನಷ್ಟು ಆಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.