ಮುಂಬೈ: 2024–25ರ ಋತುವಿನಲ್ಲಿ (ಅಕ್ಟೋಬರ್‌ನಿಂದ ಸೆಪ್ಟೆಂಬರ್) ದೇಶದಲ್ಲಿ ಹತ್ತಿ ಉತ್ಪಾದನೆಯಲ್ಲಿ ಇಳಿಕೆ ಆಗಲಿದೆ ಎಂದು ಭಾರತೀಯ ಹತ್ತಿ ಬೆಳೆಗಾರರ ಒಕ್ಕೂಟ (ಸಿಎಐ) ಅಂದಾಜಿಸಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಹತ್ತಿ ಉತ್ಪಾದನೆ 336 ಲಕ್ಷ ಬೇಲ್ ಇತ್ತು. ಈ ಬಾರಿ 311 ಲಕ್ಷ ಬೇಲ್‌ಗೆ ಇಳಿಯುವ ನಿರೀಕ್ಷೆ ಇದೆ. ಹೆಚ್ಚಾಗಿ ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ಇಳುವರಿ ಕಡಿಮೆ ಆಗಿರುವುದೇ ಇಳಿಕೆಗೆ ಕಾರಣ ಎಂದು ತಿಳಿಸಿದೆ.
ಕಳೆದ ಬಾರಿ ಉತ್ತರ ವಲಯದಲ್ಲಿ 45 ಲಕ್ಷ ಬೇಲ್ ಮತ್ತು ಕೇಂದ್ರ ವಲಯದಲ್ಲಿ 202 ಲಕ್ಷ ಬೇಲ್ ಹತ್ತಿ ಉತ್ಪಾದನೆಯಾಗಿತ್ತು. ಈ ಬಾರಿ ಕ್ರಮವಾಗಿ 29 ಲಕ್ಷ ಮತ್ತು 186 ಲಕ್ಷ ಬೇಲ್‌ಗೆ ಇಳಿಯುವ ನಿರೀಕ್ಷೆ ಇದೆ. ಒಂದು ಬೇಲ್‌ನಲ್ಲಿ 170 ಕೆ.ಜಿ ಹತ್ತಿ ಇರುತ್ತದೆ. ಆದರೆ, ಇದೇ ವೇಳೆ ದಕ್ಷಿಣ ವಲಯದ ಹತ್ತಿ ಉತ್ಪಾದನೆಯಲ್ಲಿ ಏರಿಕೆಯಾಗಲಿದ್ದು, 89 ಲಕ್ಷ ಬೇಲ್ ಆಗುವ ನಿರೀಕ್ಷೆ ಇದೆ. ಕಳೆದ ಬಾರಿ 82 ಲಕ್ಷ ಬೇಲ್ ಇತ್ತು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.