ADVERTISEMENT

ಯೂನಿಕಾರ್ನ್‌: 3ನೇ ಸ್ಥಾನಕ್ಕೇರಿದ ಭಾರತ

ಪಿಟಿಐ
Published 22 ಡಿಸೆಂಬರ್ 2021, 15:23 IST
Last Updated 22 ಡಿಸೆಂಬರ್ 2021, 15:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಅತಿ ಹೆಚ್ಚಿನ ಯೂನಿಕಾರ್ನ್‌ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಯುನೈಟೆಡ್‍ ಕಿಂಗ್‍ಡಮ್ ಅನ್ನು ಹಿಂದಿಕ್ಕಿ ಭಾರತವು ಮೂರನೇ ಸ್ಥಾನಕ್ಕೇರಿದೆ. ಅಮೆರಿಕ ಮತ್ತು ಚೀನಾ ಮೊದಲ ಎರಡು ಸ್ಥಾನಗಳಲ್ಲಿವೆ.

ಒಂದೇ ವರ್ಷದಲ್ಲಿ 33 ಯೂನಿಕಾರ್ನ್‌ಗಳು (₹ 7,435 ಕೋಟಿಗಿಂತ ಹೆಚ್ಚಿನ ಬಂಡವಾಳ ಮೌಲ್ಯ ಹೊಂದಿರುವ ನವೋದ್ಯಮ) ಸೇರ್ಪಡೆ ಆಗಿರುವುದರಿಂದ ಭಾರತವು ಈ ಸ್ಥಾನಕ್ಕೆ ಏರಲು ಸಾಧ್ಯವಾಯಿತು ಎಂದು ಹುರೂನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಬಿಡುಗಡೆ ಮಾಡಿರುವ 2021ರ ವರದಿಯಲ್ಲಿ ತಿಳಿಸಲಾಗಿದೆ.

ಭಾರತವು ಹಿಂದಿನ ವರ್ಷ ನಾಲ್ಕನೇ ಸ್ಥಾನದಲ್ಲಿತ್ತು. ಬೈಜೂಸ್‌, ಇನ್‌ಮೊಬಿ, ಓಯೊ, ರೇಜರ್‌ಪೆ ದೇಶದಲ್ಲಿನ ಪ್ರಮುಖ ಯೂನಿಕಾರ್ನ್‌ಗಳು. ದೇಶದಲ್ಲಿ ಬೆಂಗಳೂರು ಅತಿ ಹೆಚ್ಚಿನ ಯೂನಿಕಾರ್ನ್‌ಗಳಿಗೆ ತಾಣವಾಗಿದೆ ಎಂದೂ ವರದಿಯು ತಿಳಿಸಿದೆ.

ADVERTISEMENT

ದೇಶವಾರು ವಿವರ

ದೇಶ;ಯೂನಿಕಾರ್ನ್‌ ಸಂಖ್ಯೆ

ಅಮೆರಿಕ;487

ಚೀನಾ;301

ಭಾರತ;54

ಯುನೈಟೆಡ್‍ ಕಿಂಗ್‍ಡಮ್;39

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.