ADVERTISEMENT

ಸುಂಕ ಹೆಚ್ಚಳ: ಮೆಕ್ಸಿಕೊ ಜೊತೆ ಮಾತುಕತೆ ನಡೆದಿದೆ ಎಂದ ಭಾರತ್ ಸರ್ಕಾರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 14:47 IST
Last Updated 13 ಡಿಸೆಂಬರ್ 2025, 14:47 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ </p></div>

ಪ್ರಧಾನಿ ನರೇಂದ್ರ ಮೋದಿ

   

(ಸಂಗ್ರಹ ಚಿತ್ರ) 

ನವದೆಹಲಿ: ಮೆಕ್ಸಿಕೊ ದೇಶವು ಭಾರತದ ಹಲವು ಸರಕುಗಳ ಮೇಲೆ ಏಕಪಕ್ಷೀಯವಾಗಿ ತೆರಿಗೆ ಹೆಚ್ಚು ಮಾಡಿರುವ ಕ್ರಮದ ವಿಚಾರವಾಗಿ ಆ ದೇಶದ ಜೊತೆ ಮಾತುಕತೆ ನಡೆದಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.

ADVERTISEMENT

ಎರಡೂ ದೇಶಗಳಿಗೆ ಅನುಕೂಲ ಆಗುವಂತೆ ಪರಿಹಾರ ಕಂಡುಕೊಳ್ಳಲು ಮಾತುಕತೆ ನಡೆದಿದೆ. ದೇಶದ ರಫ್ತುದಾರರ ಹಿತವನ್ನು ಕಾಯಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವ ಹಕ್ಕು ಭಾರತಕ್ಕೆ ಇದ್ದೇ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೆಕ್ಸಿಕೊ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಇಲ್ಲದ ದೇಶಗಳಾದ ಭಾರತ, ಚೀನಾ, ದಕ್ಷಿಣ ಕೊರಿಯಾ, ಥಾಯ್ಲೆಂಡ್‌ ಮತ್ತು ಇಂಡೊನೇಷ್ಯಾದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲಾಗಿದೆ.

‘ಭಾರತವು ಮೆಕ್ಸಿಕೊ ಜೊತೆಗಿನ ಪಾಲುದಾರಿಕೆಗೆ ಗೌರವ ನೀಡುತ್ತದೆ, ಎರಡೂ ದೇಶಗಳ ಉದ್ದಿಮೆಗಳು ಹಾಗೂ ಗ್ರಾಹಕರಿಗೆ ಪ್ರಯೋಜನಕಾರಿ ಆಗುವಂತಹ ಸಮತೋಲನದ ವ್ಯಾಪಾರ ಸಂಬಂಧವನ್ನು ಹೊಂದಲು ಜೊತೆಯಾಗಿ ಕೆಲಸ ಮಾಡಲು ಸಿದ್ಧವಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.