ADVERTISEMENT

ಭಾರತದಿಂದ 5.16 ಲಕ್ಷ ಟನ್‌ ಸಕ್ಕರೆ ರಫ್ತು: ಎಐಎಸ್‌ಟಿಎ ಮಾಹಿತಿ

ಪಿಟಿಐ
Published 10 ಜೂನ್ 2025, 13:27 IST
Last Updated 10 ಜೂನ್ 2025, 13:27 IST
ಸಕ್ಕರೆ
ಸಕ್ಕರೆ   

ನವದೆಹಲಿ: 2024–25ರ ಸಕ್ಕರೆ ಮಾರುಕಟ್ಟೆ ವರ್ಷದ (ಅಕ್ಟೋಬರ್‌–ಸೆಪ್ಟೆಂಬರ್‌) ಜೂನ್‌ 6ರವರೆಗೆ ದೇಶದಿಂದ 5.16 ಲಕ್ಷ ಟನ್‌ ಸಕ್ಕರೆ ರಫ್ತಾಗಿದೆ ಎಂದು ಅಖಿಲ ಭಾರತ ಸಕ್ಕರೆ ವ್ಯಾಪಾರಿಗಳ ಒಕ್ಕೂಟ (ಎಐಎಸ್‌ಟಿಎ) ಮಂಗಳವಾರ ಹೇಳಿದೆ.

4.09 ಲಕ್ಷ ಟನ್‌ ಬಿಳಿ ಸಕ್ಕರೆ, 81,845 ಟನ್‌ ಸಂಸ್ಕರಿಸಿದ ಸಕ್ಕರೆ ಮತ್ತು 25,382 ಟನ್‌ ಕಚ್ಚಾ ಸಕ್ಕರೆ ರಫ್ತಾಗಿದೆ. 

ಸೊಮಾಲಿಯಾಗೆ ಗರಿಷ್ಠ 1.18 ಲಕ್ಷ ಟನ್‌ ರಫ್ತಾಗಿದೆ. ಶ್ರೀಲಂಕಾ 76,401 ಟನ್‌, ಅಫ್ಘಾನಿಸ್ತಾನ 72,833 ಟನ್ ಮತ್ತು ದಿಬೌತಿಗೆ 69,609 ಟನ್‌ ರಫ್ತು ಮಾಡಲಾಗಿದೆ ಎಂದು ತಿಳಿಸಿದೆ.

ADVERTISEMENT

ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, 8 ಲಕ್ಷ ಟನ್‌ ರಫ್ತಾಗಬಹುದು ಎಂದು ಇತ್ತೀಚೆಗೆ ಎಐಎಸ್‌ಟಿಎ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.