ADVERTISEMENT

2022–23ರಲ್ಲಿ ಕುಸಿದ ವಿದೇಶಿ ವಿನಿಮಯ ಮೀಸಲು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 18:09 IST
Last Updated 7 ಏಪ್ರಿಲ್ 2023, 18:09 IST
   

ನವದೆಹಲಿ: ದೇಶದ ವಿದೇಶಿ ವಿನಿಮಯ ಮೀಸಲು 2022–23ನೆಯ ಹಣಕಾಸು ವರ್ಷದಲ್ಲಿ 28.03 ಬಿಲಿಯನ್ ಡಾಲರ್‌ನಷ್ಟು (₹ 2.29 ಲಕ್ಷ ಕೋಟಿ) ಇಳಿಕೆ ಆಗಿದೆ. ‌

ರೂಪಾಯಿ ಮೌಲ್ಯವು ತೀವ್ರವಾಗಿ ಕುಸಿಯುವುದನ್ನು ತಡೆಯಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನಲ್ಲಿದ್ದ ಡಾಲರ್ ಸಂಗ್ರಹವನ್ನು ಮಾರಾಟ ಮಾಡಿದ್ದು ವಿದೇಶಿ ವಿನಿಮಯ ಮೀಸಲು ಕಡಿಮೆ ಆಗಲು ಒಂದು ಕಾರಣ.

2022ರ ಏಪ್ರಿಲ್‌ 1ರಂದು ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹ 49.64 ಲಕ್ಷ ಕೋಟಿ ಆಗಿತ್ತು. ಇದು 2023ರ ಮಾರ್ಚ್‌ 31ಕ್ಕೆ ₹ 47.34 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.