ADVERTISEMENT

ಶೇ 5.8ರಷ್ಟು ಜಿಡಿಪಿ ಬೆಳವಣಿಗೆ: ಎಸ್‌ಬಿಐ ಎಕೊವ್ರ್ಯಾಪ್ ವರದಿ

ಪಿಟಿಐ
Published 18 ಫೆಬ್ರುವರಿ 2022, 12:58 IST
Last Updated 18 ಫೆಬ್ರುವರಿ 2022, 12:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡ 5.8ರಷ್ಟು ಬೆಳವಣಿಗೆ ಆಗಿರುವ ಸಾಧ್ಯತೆ ಇದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಎಕೊವ್ರ್ಯಾಪ್ ವರದಿ ತಿಳಿಸಿದೆ.

ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 8.4ರಷ್ಟು ಬೆಳವಣಿಗೆ ಕಂಡಿದೆ. ಆದರೆ, ಮೊದಲ ತ್ರೈಮಾಸಿಕದಲ್ಲಿ ಆಗಿದ್ದ ಶೇ 20.1ರಷ್ಟು ಬೆಳವಣಿಗೆಗೆ ಹೋಲಿಸಿದರೆ ಎರಡನೇ ತ್ರೈಮಾಸಿಕದ ಬೆಳವಣಿಗೆ ಕಡಿಮೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಮೂರನೇ ತ್ರೈಮಾಸಿಕದ ಜಿಡಿಪಿ ಅಂಕಿ–ಅಂಶವನ್ನುಫೆಬ್ರುವರಿ 28ರಂದು ಬಿಡುಗಡೆ ಮಾಡಲಿದೆ.

ADVERTISEMENT

2021–22ನೇ ಹಣಕಾಸು ವರ್ಷಕ್ಕೆ ಜಿಡಿಪಿ ಬೆಳವಣಿಗೆಯು ಶೇ 8.8ರಷ್ಟು ಆಗಲಿದೆ ಎಂದು ಎಸ್‌ಬಿಐ ವರದಿ ಹೇಳಿದೆ. ಜಿಡಿಪಿಯು ಶೇ 9.3ರಷ್ಟು ಆಗಲಿದೆ ಎಂದು ಈ ಹಿಂದೆ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.