ADVERTISEMENT

ಎರಡನೆಯ ಅಲೆ ಎದುರಿಸಲು ಭಾರತ ಸಜ್ಜು: ಹಣಕಾಸು ಸಚಿವಾಲಯ

ಪಿಟಿಐ
Published 5 ಏಪ್ರಿಲ್ 2021, 19:30 IST
Last Updated 5 ಏಪ್ರಿಲ್ 2021, 19:30 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ನವದೆಹಲಿ: ಕೊರೊನಾ ವೈರಾಣುವಿನ ಎರಡನೆಯ ಅಲೆಯನ್ನು ಎದುರಿಸಲು ಭಾರತವು ಸಜ್ಜಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿಯೊಂದು ಹೇಳಿದೆ.

‘2020–21ನೇ ಹಣಕಾಸು ವರ್ಷದಲ್ಲಿ ಐತಿಹಾಸಿಕ ಸಾಂಕ್ರಾಮಿಕವೊಂದನ್ನು ಎದುರಿಸಿದ ನಂತರ, ಭಾರತದ ಅರ್ಥ ವ್ಯವಸ್ಥೆಯು ಇನ್ನಷ್ಟು ಉತ್ತಮವಾಗಿ, ಇನ್ನಷ್ಟು ಗಟ್ಟಿಯಾಗಿ ರೂಪುಗೊಳ್ಳಲು ಸಜ್ಜಾಗಿ ನಿಂತಿದೆ. ಹಲವು ಸೂಚ್ಯಂಕಗಳು ಈ ಮಾತಿಗೆ ಆಧಾರವಾಗಿವೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಹೂಡಿಕೆಯ ಪ್ರಮಾಣ ಹೆಚ್ಚಾಗುತ್ತಿರುವುದು, ಆತ್ಮನಿರ್ಭರ ಯೋಜನೆ, ಮೂಲಸೌಕರ್ಯ ಹಾಗೂ ಬಂಡವಾಳ ವೆಚ್ಚಕ್ಕೆ ಭಾರಿ ಆದ್ಯತೆ ನೀಡಿರುವುದು ಈ ಚೇತರಿಕೆಗೆ ಕಾರಣವಾಗಿವೆ’ ಎಂದು ಅದು ಉಲ್ಲೇಖಿಸಿದೆ.

ADVERTISEMENT

ಫೆಬ್ರುವರಿಯ ನಂತರ ಪ್ರತಿದಿನ ವರದಿಯಾಗುತ್ತಿರುವ ಕೋವಿಡ್–19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿರುವುದು ಎರಡನೆಯ ಅಲೆ ಶುರುವಾಗಿರುವುದರ ಸೂಚನೆ. ಆದರೆ, ಭಾರತವು ಎರಡನೆಯ ಅಲೆ ಶುರುವಾಗುವುದನ್ನು ವಿಳಂಬಿಸುವುದರಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಮೊದಲ ಅಲೆಯು ಅತ್ಯಂತ ತೀವ್ರವಾಗಿದ್ದ ಹೊತ್ತಿಗೂ ಎರಡನೆಯ ಅಲೆ ಶುರುವಾಗಿದ್ದಕ್ಕೂ ನಡುವೆ 151 ದಿನಗಳ ಅಂತರವಿದೆ. ಇತರ ದೇಶಗಳಲ್ಲಿ ಈ ಅಂತರ ಇನ್ನೂ ಕಡಿಮೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.