ನವದೆಹಲಿ: ರೇರ್ ಅರ್ಥ್ ಮ್ಯಾಗ್ನೆಟ್‌ಗಳ ಆಮದಿಗೆ ಚುರುಕು ನೀಡುವ ಉದ್ದೇಶದಿಂದ ಭಾರತದ ಆಟೊಮೊಬೈಲ್ ಉದ್ಯಮದ ಪ್ರತಿನಿಧಿಗಳ ನಿಯೋಗವೊಂದು ಚೀನಾಕ್ಕೆ ಭೇಟಿ ನೀಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ಹೇಳಿವೆ.
ಅಂದಾಜು 40–50 ಮಂದಿ ಪ್ರತಿನಿಧಿಗಳಿಗೆ ವೀಸಾ ಅನುಮತಿ ಸಿಕ್ಕಿದೆ. ಆದರೆ, ಚೀನಾದ ವಾಣಿಜ್ಯ ಸಚಿವಾಲಯದ ಹಸಿರು ನಿಶಾನೆಗೆ ಅವರು ಕಾಯುತ್ತಿದ್ದಾರೆ ಎಂದು ಗೊತ್ತಾಗಿದೆ.
ಆಟೊಮೊಬೈಲ್, ಗೃಹೋಪಯೋಗಿ ಉಪಕರಣಗಳು ಮತ್ತು ಪರಿಸರ ಪೂರಕ ಇಂಧನ ಉತ್ಪಾದನೆಯಲ್ಲಿ ಬಳಕೆಯಾಗುವ ರೇರ್ ಅರ್ಥ್ ಮ್ಯಾಗ್ನೆಟ್ ರಫ್ತಿನ ಮೇಲೆ ಚೀನಾ ಏಪ್ರಿಲ್ 4ರಿಂದ ಅನ್ವಯವಾಗುವಂತೆ ನಿರ್ಬಂಧ ವಿಧಿಸಿದೆ.
ಇವುಗಳ ಪೂರೈಕೆಯು ಸರಿಯಾಗಿ ಆಗದೆ ಇದ್ದರೆ ದೇಶದಲ್ಲಿ ಆಟೊಮೊಬೈಲ್ ತಯಾರಿಕೆಗೆ ತೊಂದರೆ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.