ADVERTISEMENT

ತಂತ್ರಜ್ಞಾನ ಉದ್ಯಮ: ₹28 ಲಕ್ಷ ಕೋಟಿ ವರಮಾನ ನಿರೀಕ್ಷೆ

ಪಿಟಿಐ
Published 24 ಫೆಬ್ರುವರಿ 2026, 14:15 IST
Last Updated 24 ಫೆಬ್ರುವರಿ 2026, 14:15 IST
   

ಮುಂಬೈ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ತಂತ್ರಜ್ಞಾನ ಉದ್ಯಮವು ₹28.64 ಲಕ್ಷ ಕೋಟಿಯಷ್ಟು ವರಮಾನ ಕಾಣುವ ನಿರೀಕ್ಷೆ ಇದೆ’ ಎಂದು ಐ.ಟಿ ಉದ್ಯಮಗಳ ಸಂಘಟನೆ ನಾಸ್ಕಾಂ ಮಂಗಳವಾರ ತಿಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ತಂತ್ರಜ್ಞಾನ ಉದ್ಯಮ ವಲಯವು ₹27 ಲಕ್ಷ ಕೋಟಿಯಷ್ಟು ವರಮಾನ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ 6.1ರಷ್ಟು ಬೆಳವಣಿಗೆ ಆಗಬಹುದು ಎಂದು ನಾಸ್ಕಾಂ ಅಂದಾಜು ಮಾಡಿದೆ.

2024–25ರಲ್ಲಿ ಉದ್ಯಮವು ಶೇ 5.9ರಷ್ಟು ಬೆಳವಣಿಗೆ ಕಂಡಿದೆ.

ADVERTISEMENT

ಉದ್ಯಮವು ಉದ್ಯೋಗ ಸೃಷ್ಟಿಯ ಎಂಜಿನ್‌ ಆಗಿ ಮುಂದುವರಿದಿದೆ. ಕಳೆದ ಆರ್ಥಿಕ ವರ್ಷದಲ್ಲಿ ಈ ಉದ್ಯಮದಲ್ಲಿ ಒಟ್ಟು 58.2 ಲಕ್ಷ ಉದ್ಯೋಗಗಳಿದ್ದವು, ಅದು ಈ ಬಾರಿ 59.5 ಲಕ್ಷಕ್ಕೆ ಹೆಚ್ಚಳವಾಗಿದೆ. ಅಂದರೆ ಶೇ 2.3ರಷ್ಟು ಬೆಳವಣಿಗೆ ಕಂಡುಬಂದಿದೆ ಎಂದು ನಾಸ್ಕಾಂ ಅಧ್ಯಕ್ಷ ರಾಜೇಶ್ ನಂಬಿಯಾರ್ ಹೇಳಿದ್ದಾರೆ.

2024–25ರಲ್ಲಿ ವಲಯಕ್ಕೆ 1.33 ಲಕ್ಷ ಉದ್ಯೋಗಿಗಳು ಸೇರ್ಪಡೆಯಾಗಿದ್ದರೆ, ಅದು ಈ ಬಾರಿ 1.35 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.