ಮುಂಬೈ: ಲಾಕ್ಡೌನ್ನಿಂದಾಗಿಚಿನ್ನದ ರಿಟೇಲ್ ಖರೀದಿ ಕಡಿಮೆಯಾಗಿದ್ದರಿಂದ ಹಾಗೂ ಚಿನ್ನದ ದರ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಜುಲೈನಲ್ಲಿ ಚಿನ್ನದ ಆಮದು ಶೇಕಡ 24ರಷ್ಟು ಇಳಿಕೆಯಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಚಿನ್ನದ ದರ ಹೆಚ್ಚಳವಾಗಿರುವ ಕಾರಣ, ಈ ವರ್ಷದ ಜುಲೈನಲ್ಲಿ ಆಮದು ಪ್ರಮಾಣ ಕಡಿಮೆ ಆಗಿದ್ದರೂ, ಒಟ್ಟು ಮೌಲ್ಯದಲ್ಲಿ ಹೆಚ್ಚಳ ಆಗಿದೆ.ಮೌಲ್ಯದ ಲೆಕ್ಕದಲ್ಲಿ ಈ ವರ್ಷದ ಜುಲೈನಲ್ಲಿ ಆಮದಾದ ಚಿನ್ನವು ₹13,350 ಕೋಟಿಗಳಷ್ಟು. ಕಳೆದ ವರ್ಷದ ಜುಲೈನಲ್ಲಿ ₹ 12,825 ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು.
ಅಂಕಿ–ಅಂಶ
30 ಟನ್ - 2020 ಜುಲೈ
39.66 ಟನ್ -2019 ಜುಲೈ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.