ADVERTISEMENT

‘ತಯಾರಿಕಾ ವಲಯ: ಸದೃಢ ಬೆಳವಣಿಗೆ ನಿರೀಕ್ಷೆ’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 14:11 IST
Last Updated 9 ಅಕ್ಟೋಬರ್ 2025, 14:11 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ದೇಶದ ತಯಾರಿಕಾ ವಲಯವು ಸದೃಢ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ’ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಫಿಕ್ಕಿ) ಸಮೀಕ್ಷೆ ಗುರುವಾರ ತಿಳಿಸಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತಯಾರಿಕಾ ವಲಯದ ಉತ್ಪಾದನೆ ಹೆಚ್ಚಳವಾಗಿ ಅಥವಾ ಅಷ್ಟೇ ಪ್ರಮಾಣದಲ್ಲಿ ಇದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ 87ರಷ್ಟು ಮಂದಿ ಹೇಳಿದ್ದಾರೆ. 

ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತಯಾರಿಕಾ ವಲಯದ ಪ್ರಮುಖ ಎಂಟು ವಿಭಾಗಗಳ ಕಾರ್ಯಾಚರಣೆಯನ್ನು ಫಿಕ್ಕಿ ಮೌಲ್ಯಮಾಪನ ಮಾಡಿದೆ. ‌

ADVERTISEMENT

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸರಕುಗಳಿಗೆ ಕಾರ್ಯಾದೇಶ ಹೆಚ್ಚಾಗಿರುವ ನಿರೀಕ್ಷೆ ಇದೆ. ಜಿಎಸ್‌ಟಿ ದರ ಕಡಿತ ಘೋಷಿಸಿದ ನಂತರ ಕಾರ್ಯಾದೇಶ ಇನ್ನೂ ಹೆಚ್ಚಾಗಿರುವ ನಿರೀಕ್ಷೆ ಇದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 83ರಷ್ಟು ಮಂದಿ ಹೇಳಿದ್ದಾರೆ. 

ಕಬ್ಬಿಣದ ಅದಿರು, ರಾಸಾಯನಿಕಗಳು, ಪ್ರಮುಖ ಬಿಡಿ ಭಾಗಗಳು ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತಯಾರಿಕಾ ವೆಚ್ಚ ಹೆಚ್ಚಳವಾಗಿದೆ. ಜೊತೆಗೆ ಕಾರ್ಮಿಕ ವೆಚ್ಚ, ಸರಕು ಸಾಗಣೆ, ವಿದ್ಯುತ್‌ ವೆಚ್ಚ ಹೆಚ್ಚಳವಾಗಿದೆ. ಇದರಿಂದ ಪ್ರಸಕ್ತ ಆರ್ಥಿಕ ವರ್ಷದ ಜೂನ್ ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಉತ್ಪಾದನೆ ವೆಚ್ಚ ಹೆಚ್ಚಿದೆ.

ಮುಂದಿನ ದಿನಗಳಲ್ಲಿ ಹೂಡಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರಲ್ಲಿ ಸಕಾರಾತ್ಮಕ ಧೋರಣೆ ಇದೆ, ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 50ಕ್ಕೂ ಹೆಚ್ಚು ಮಂದಿ ಮುಂದಿನ ಆರು ತಿಂಗಳಿನಲ್ಲಿ ಹೂಡಿಕೆ ಮತ್ತು ವಹಿವಾಟನ್ನು ವಿಸ್ತರಣೆ ಮಾಡಿಕೊಳ್ಳುವ ಆಲೋಚನೆ ಹೊಂದಿದ್ದಾರೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.