ADVERTISEMENT

ದೇಶದ ತಯಾರಿಕಾ ವಲಯದ ವಹಿವಾಟಿನಲ್ಲಿ ಏರಿಕೆ

ಪಿಟಿಐ
Published 2 ಆಗಸ್ಟ್ 2021, 8:38 IST
Last Updated 2 ಆಗಸ್ಟ್ 2021, 8:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:‘ದೇಶದ ತಯಾರಿಕಾ ವಲಯದ ವಹಿವಾಟು ಜುಲೈನಲ್ಲಿ ಏರಿಕೆ ಕಂಡಿದೆ. ಇದು ಮೂರು ತಿಂಗಳಲ್ಲಿ ಉಂಟಾದ ಪ್ರಬಲ ಬೆಳವಣಿಗೆಯಾಗಿದೆ’ ಎಂದು ಮಾಸಿಕ ಸಮೀಕ್ಷೆಯೊಂದು ಸೋಮವಾರ ಹೇಳಿದೆ.

ಜೂನ್‌ನಲ್ಲಿ 48.1 ರಷ್ಟಿದ್ದಐಎಚ್‌ಎಸ್‌ ಮಾರ್ಕಿಟ್‌ ಇಂಡಿಯಾದ ಪಿಎಂಐ ಸೂಚ್ಯಂಕವು ಜುಲೈ ವೇಳೆಗೆ 55.3ಕ್ಕೆ ಏರಿಕೆಯಾಗಿದೆ.

‘ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಜೂನ್‌ನಲ್ಲಿ ಕುಗ್ಗಿತ್ತು. ಆದರೆ ಇದೀಗ ತಯಾರಿಕಾ ವಲಯವು ಚೇತರಿಸಿಕೊಳ್ಳುತ್ತಿದೆ. ಮೂರನೇ ಒಂದು ಭಾಗದಷ್ಟು ಕಂಪೆನಿಗಳ ಮಾಸಿಕ ಉತ್ಪಾದನೆಯು ವಿಸ್ತರಣೆಗೊಂಡಿದೆ. ಜುಲೈ ವೇಳೆಗೆ ಸ್ಥಳೀಯ ಕೋವಿಡ್‌ ನಿಯಮಗಳನ್ನು ಸಡಿಲಗೊಳಿಸಲಾಯಿತು. ಅಲ್ಲದೆ ಬೇಡಿಕೆ ಪ್ರಮಾಣದಲ್ಲೂ ಸುಧಾರಣೆ ಉಂಟಾದ್ದರಿಂದ ವಹಿವಾಟಿನಲ್ಲಿ ಏರಿಕೆಯಾಗಿದೆ’ ಎಂದು ಐಎಚ್‌ಎಚ್‌ ಮಾರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕರಾದ ಪಾಲಿಯಾನ ಡಿ. ಲಿಮಾ ಅವರು ಹೇಳಿದರು.

ADVERTISEMENT

‘ಕೋವಿಡ್‌ ಪಿಡುಗು ಹೀಗೆಯೇ ಕಡಿಮೆಯಾಗುತ್ತಾ ಹೋದರೆ 2021ರ ಸಾಲಿನಲ್ಲಿ ಕೈಗಾರಿಕಾ ಉತ್ಪಾದನೆಯಲ್ಲಿ ಶೇಕಡ 9.7 ವಾರ್ಷಿಕ ಹೆಚ್ಚಳ ಉಂಟಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಜುಲೈ ತಿಂಗಳಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣದಲ್ಲೂ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.