ಕೋಲ್ಕತ್ತ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ನೈಜ ಜಿಡಿಪಿ ಬೆಳವಣಿಗೆ ಶೇಕಡ 6.5ಕ್ಕಿಂತ ಹೆಚ್ಚಾಗಬಹುದು ಎಂದು ಕ್ರೆಡಿಟ್ ರೇಟಿಂಗ್ಸ್ ಸಂಸ್ಥೆ ಐಸಿಆರ್‌ಎ ಬುಧವಾರ ತಿಳಿಸಿದೆ.
ಇದೇ ಅವಧಿಯಲ್ಲಿ ಒಟ್ಟು ಮೌಲ್ಯ ವರ್ಧನೆಯ (ಜಿವಿಎ) ಪ್ರಗತಿ ಶೇ 6.3ರಷ್ಟಾಗುವ ನಿರೀಕ್ಷೆಯಿದೆ ಎಂದು ತನ್ನ ಮುನ್ನೋಟದಲ್ಲಿ ಹೇಳಿದೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಶೇ 4.2ರಷ್ಟು ಮತ್ತು ಸಗಟು ಹಣದುಬ್ಬರ ಶೇ 2.7ಕ್ಕಿಂತ ಹೆಚ್ಚಬಹುದು. ವಿತ್ತೀಯ ಕೊರತೆಯು ಜಿಡಿಪಿಯ ಶೇ 4.4ರಷ್ಟು ಮತ್ತು ಚಾಲ್ತಿ ಖಾತೆ ಕೊರತೆಯು ಶೇ (–)1ರಷ್ಟು ಇರಲಿದೆ ಎಂದು ಅದು ಅಂದಾಜಿಸಿದೆ.
ಜಲಾಶಯಗಳಲ್ಲಿ ನೀರಿನ ಸಂಗ್ರಹ ವಾಡಿಕೆಗಿಂತ ಹೆಚ್ಚಿದೆ. ಹಿಂಗಾರು ಬೆಳೆಯಿಂದಾಗಿ ಹಣದ ಹರಿವು ಹೆಚ್ಚಿದೆ. ಹೀಗಾಗಿ, ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಸದೃಢವಾಗಿರುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಮುಂದಿನ ದಿನಗಳಲ್ಲಿ ದೇಶದ ವ್ಯಾಪಾರ ಸರಕುಗಳ ರಫ್ತು ಇಳಿಕೆಯಾಗಬಹುದು. ಸೇವಾ ರಫ್ತು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.