ADVERTISEMENT

ಬಿಗ್ ಬಾಸ್ಕೆಟ್‌ನಲ್ಲಿ ಹೆಚ್ಚಿನ ಷೇರು ಖರೀದಿಸಿದ ಟಾಟಾ

ರಾಯಿಟರ್ಸ್
Published 28 ಮೇ 2021, 8:44 IST
Last Updated 28 ಮೇ 2021, 8:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆನ್‌ಲೈನ್‌ ಮೂಲಕ ದಿನಸಿ ವಸ್ತುಗಳನ್ನು ಮಾರಾಟ ಮಾಡುವ 'ಬಿಗ್‌ ಬಾಸ್ಕೆಟ್‌'ನ ಹೆಚ್ಚಿನ ಷೇರುಗಳನ್ನು ಟಾಟಾ ಸನ್ಸ್ ಖರೀದಿಸಿದೆ.

ಈ ಮೂಲಕ ಭಾರತದ ಇ-ಕಾಮರ್ಸ್ ದೈತ್ಯ ಅಮೆಜಾನ್, ವಾಲ್‌ಮಾರ್ಟ್‌ನ ಫ್ಲಿಪ್‌ಕಾರ್ಟ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನೊಂದಿಗೆ ನೇರ ಸ್ಪರ್ಧೆಗಿಳಿದಿದೆ.

ಈ ಪಾಲನ್ನು ಟಾಟಾ ಸನ್ಸ್‌ನ ಘಟಕವಾದ ಟಾಟಾ ಡಿಜಿಟಲ್ ಲಿಮಿಟೆಡ್ ಖರೀದಿಸಿದೆ. ಒಪ್ಪಂದದ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಟಾಟಾ ನಿರಾಕರಿಸಿದೆ. ಬಿಗ್ ಬಾಸ್ಕೆಟ್ ಕೂಡಾ ತಕ್ಷಣಕ್ಕೆ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ADVERTISEMENT

ಬಿಗ್ ಬಾಸ್ಕೆಟ್‌ನಲ್ಲಿ ಶೇಕಡಾ 64.3ರಷ್ಟು ಪಾಲನ್ನು ಖರೀದಿಸಲು ಟಾಟಾ ಡಿಜಿಟಲ್‌ಗೆ ಮಾರ್ಚ್ ತಿಂಗಳಲ್ಲಿ ಅನುಮೋದನೆ ದೊರಕಿತ್ತು. ಈ ಒಪ್ಪಂದವು ಸುಮಾರು 95 ಶತಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಚೀನಾದ ದೈತ್ಯ ಆಲಿಬಾಬಾ ಪಾಲು ಖರೀದಿಯನ್ನು ಇದು ಒಳಗೊಂಡಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆನ್ಲೈನ್ ಇ-ಕಾಮರ್ಸ್ ದಿನಸಿ ಮಾರಾಟಕ್ಕೆ ಬೇಡಿಕೆ ಹೆಚ್ಚುತ್ತಿದೆ. ಉಪ್ಪಿನಿಂದ ತೊಡಗಿ ಐಷಾರಾಮಿ ಕಾರು, ಸಾಫ್ಟ್‌ವೇರ್ ವರೆಗೆ ಬೆರೆಯುವ ಗ್ರಾಹಕ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಟಾಟಾ, 'ಸೂಪರ್ ಆ್ಯಪ್' ಅನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.