ADVERTISEMENT

ಬಿಗ್‌ಬಾಸ್ಕೆಟ್‌ ಕಂಪನಿಯನ್ನು ಖರೀದಿಸಿದ ಟಾಟಾ

ರಾಯಿಟರ್ಸ್
Published 28 ಮೇ 2021, 11:59 IST
Last Updated 28 ಮೇ 2021, 11:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಆನ್‌ಲೈನ್‌ ಮೂಲಕ ದಿನಸಿ ಹಾಗೂ ತರಕಾರಿಗಳನ್ನು ಮಾರಾಟ ಮಾಡುವ ಬಿಗ್‌ಬಾಸ್ಕೆಟ್ ಕಂಪನಿಯನ್ನು ಟಾಟಾ ಸನ್ಸ್ ಖರೀದಿಸಿದೆ. ಇದರಿಂದಾಗಿ ಭಾರತದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಒಂದಾಗಿರುವ ಟಾಟಾ, ಇ–ಕಾಮರ್ಸ್‌ ವಿಭಾಗದಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್‌ ಹಾಗೂ ರಿಲಯನ್ಸ್ ಜೊತೆ ಸ್ಪರ್ಧೆಗೆ ಇಳಿಯಲಿದೆ.

ಬಿಗ್‌ಬಾಸ್ಕೆಟ್‌ನ ಷೇರುಗಳನ್ನು ಟಾಟಾ ಡಿಜಿಟಲ್ ಲಿಮಿಟೆಡ್ ಕಂಪನಿಯು ಖರೀದಿಸಿದೆ. ಇದು ಟಾಟಾ ಸನ್ಸ್‌ನ ಒಂದು ಅಂಗಸಂಸ್ಥೆ. ಖರೀದಿ ವಿಚಾರವಾಗಿ ಹೆಚ್ಚಿನ ವಿವರ ನೀಡಲು ಟಾಟಾ ನಿರಾಕರಿಸಿದೆ. ಸುದ್ದಿಸಂಸ್ಥೆಗೆ ಬಿಗ್‌ಬಾಸ್ಕೆಟ್‌ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.

ಉಪ್ಪಿನಿಂದ ಆರಂಭಿಸಿ ಐಷಾರಾಮಿ ಕಾರುಗಳು, ಸಾಫ್ಟ್‌ವೇರ್‌ ಉತ್ಪನ್ನಗಳವರೆಗೆ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಟಾಟಾ ಸಮೂಹವು, ಎಲ್ಲ ಬಗೆಯ ಗ್ರಾಹಕ ವ್ಯವಹಾರಗಳನ್ನು ಒಂದೇ ಕಡೆ ತರುವ ‘ಸೂಪರ್‌ ಆ್ಯಪ್‌’ ಅಭಿವೃದ್ಧಿಗೆ ಚಿಂತನೆ ನಡೆಸಿದೆ ಎಂಬ ವರದಿ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.