ADVERTISEMENT

ಮುಂದಿನ ವರ್ಷ ವಿಶ್ವಕ್ಕೆ 5ಜಿ ತಂತ್ರಜ್ಞಾನ: ದೂರಸಂಪರ್ಕ ಸಚಿವ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 17:37 IST
Last Updated 23 ಜನವರಿ 2023, 17:37 IST
   

ಗಾಂಧಿನಗರ : ದೇಶೀಯವಾಗಿ ಅಭಿವೃದ್ಧಿಪಡಿಸಿರುವ 5ಜಿ ಮತ್ತು 4ಜಿ ತಂತ್ರಜ್ಞಾವನ್ನು ದೇಶದಲ್ಲಿ ಈ ವರ್ಷ ಬಳಕೆಗೆ ತರಲಾಗುವುದು. ಮುಂದಿನ ವರ್ಷ ಜಾಗತಿಕ ಮಾರುಕಟ್ಟೆಗೆ ನೀಡಲಾಗುವುದು ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಸೋಮವಾರ ಹೇಳಿದ್ದಾರೆ.

ಬಿ20 ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಐದು ದೇಶಗಳು ಮಾತ್ರ 4ಜಿ–5ಜಿ ದೂರಸಂಪರ್ಕ ತಂತ್ರಜ್ಞಾನ ಹೊಂದಿವೆ. ಇದೀಗ ಭಾರತವು ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ತನ್ನದೇ ಆದ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಏಕಕಾಲಕ್ಕೆ 1 ಕೋಟಿ ಕರೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT