ADVERTISEMENT

ಕಡಿಮೆ ವೇತನ: ರಜೆ ಹಾಕಿದ ಇಂಡಿಗೊ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 14:03 IST
Last Updated 10 ಜುಲೈ 2022, 14:03 IST

ನವದೆಹಲಿ: ಹೈದರಾಬಾದ್‌ ಮತ್ತು ದೆಹಲಿಯಲ್ಲಿ ಇಂಡಿಗೊ ವಿಮಾನ ನಿರ್ವಹಣಾ ತಂತ್ರಜ್ಞರು ಕಡಿಮೆ ವೇತನ ವಿರೋಧಿಸಿ ಪ್ರತಿಭಟನಾರ್ಥವಾಗಿ ಕಳೆದ ಎರಡು ದಿನಗಳಿಂದ ಅನಾರೋಗ್ಯ ರಜೆ (ಸಿಕ್ ಲೀವ್‌) ಮೇಲೆ ತೆರೆಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏರ್‌ ಇಂಡಿಯಾ ವಿಮಾನ ಸಂಸ್ಥೆ ನಡೆಸಿದ ನೇಮಕಾತಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂಡಿಗೊದ ವಿಮಾನಗಳ ಕ್ಯಾಬಿನ್‌ ಸಿಬ್ಬಂದಿಯಲ್ಲಿ ಬಹುತೇಕರು ಅನಾರೋಗ್ಯ ರಜೆ ಪಡೆದಿದ್ದರಿಂದ ಜುಲೈ 2 ರಂದು ಇಂಡಿಗೊ ಸಂಸ್ಥೆಯ ಶೇ 55 ದೇಶಿಯ ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿತ್ತು.

ಕೋವಿಡ್‌ 19 ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿದ್ದಾಗ ಇಂಡಿಗೊ ತನ್ನ ದೊಡ್ಡ ವಿಭಾಗದ ಉದ್ಯೋಗಿಗಳ ಸಂಬಳ ಕಡಿತಗೊಳಿಸಿತ್ತು.

ADVERTISEMENT

ಯಾವುದೇಶಿಸ್ತು ಕ್ರಮ ಕೈಗೊಳ್ಳದಂತೆ ಇಂಡಿಗೊ ತಂತ್ರಜ್ಞರು ಅನಾರೋಗ್ಯ ರಜೆ ಮೇಲೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಬಗ್ಗೆ ಇಂಡಿಗೊ ಸಂಸ್ಥೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್, ನವೀಕರಿಸಿದ ಜೆಟ್ ಏರ್‌ವೇಸ್ ಮತ್ತು ಟಾಟಾ ಸಮೂಹ-ಮಾಲೀಕತ್ವದ ಏರ್ ಇಂಡಿಯಾ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.