ADVERTISEMENT

ಭಾರತ–ಪಾಕ್‌ ಸಂಘರ್ಷ | ನಗಣ್ಯ ಪರಿಣಾಮ: ಸಂಜಯ್‌ ಮಲ್ಹೋತ್ರಾ

ಪಿಟಿಐ
Published 6 ಜೂನ್ 2025, 16:06 IST
Last Updated 6 ಜೂನ್ 2025, 16:06 IST
ಆಪರೇಷನ್‌ ಸಿಂಧೂರ
ಆಪರೇಷನ್‌ ಸಿಂಧೂರ   

ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವು ದೇಶದ ಆರ್ಥಿಕತೆಯ ಮೇಲೆ ನಗಣ್ಯ ಪರಿಣಾಮ ಬೀರಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್‌ ಮಲ್ಹೋತ್ರಾ ಹೇಳಿದ್ದಾರೆ.

ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಮೇ 7ರಂದು ಭಾರತವು ‘ಆಪರೇಷನ್‌ ಸಿಂಧೂರ’ ನಡೆಸಿ, ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಮೂಲಸೌಕರ್ಯ ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು.

ಈ ಸಂಘರ್ಷದಿಂದಾಗಿ ಉತ್ತರ ಭಾರತದಲ್ಲಿನ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಕೆಲಕಾಲ ಸ್ಥಗಿತಗೊಂಡಿತು. ಆದರೆ, ಪ್ರಮುಖ ಪೂರೈಕೆ ಸರಪಳಿಯಲ್ಲಿ ಅಡಚಣೆ ಉಂಟಾಗಿಲ್ಲ. ಹೀಗಾಗಿ, ದೇಶದ ಆರ್ಥಿಕ ಚಟುವಟಿಕೆ, ಪ್ರಗತಿ, ಹಣದುಬ್ಬರದ ಮೇಲೆ ಪರಿಣಾಮ ಬೀರಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.

ADVERTISEMENT

ಸಂಘರ್ಷದ ವೇಳೆ ಕೆಲ ದಿನ ಈ ಪ್ರದೇಶದಲ್ಲಿ ಸರಕುಗಳ ಬೆಲೆಯಲ್ಲಿ ಏರಿಕೆಯಾಗಿದ್ದರೂ, ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.