ನವದೆಹಲಿ: ಕೋವಿಡ್–19 ಪಿಡುಗು ಕಂಪನಿಯ ಲಾಭದ ಮೇಲೆ ಅಲ್ಪ ಪರಿಣಾಮ ಬೀರಲಿದೆ ಎಂದು ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೊಸಿಸ್ ಹೇಳಿದೆ.
ಕೆಲವು ಗ್ರಾಹಕರು ಸೇವಾ ದರ ಇಳಿಕೆ ಅಥವಾ ವಿನಾಯಿತಿ ಕೇಳುತ್ತಿದ್ದಾರೆ. ಇದರಿಂದಾಗಿ ಲಾಭದಲ್ಲಿ ಅಲ್ಪಮಟ್ಟಿನ ಇಳಿಕೆ ಆಗಬಹುದಷ್ಟೆ ಎಂದಿದೆ.
2019–20ನೇ ಹಣಕಾಸು ವರ್ಷಕ್ಕೆ ಕಂಪನಿಯ ಸಿಇಒ ಸಲೀಲ್ ಪಾರೇಖ್ ಅವರು ₹ 46.44 ಕೋಟಿ ವೇತನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.