ADVERTISEMENT

ಎಂಎಸ್‌ಎಂಇ ನೆರವಿಗೆ ‘ಇನ್‌ಸ್ಟಾಕ್ಯಾಷ್‌’

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 12:29 IST
Last Updated 2 ಜುಲೈ 2020, 12:29 IST
-
-   

ಬೆಂಗಳೂರು: ಕೋವಿಡ್‌ ಬಿಕ್ಕಟ್ಟಿನಿಂದ ಆರ್ಥಿಕ ನಷ್ಟಕ್ಕೆ ಒಳಗಾಗಿರುವಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ (ಎಂಎಸ್‌ಎಂಇ) ವಲಯಕ್ಕೆ ನೆರವಾಗಲುಇನ್‌ಸ್ಟಾಮೊಜೊ ಕಂಪನಿಯು ‘ಇನ್‌ಸ್ಟಾಕ್ಯಾಷ್‌’ ಯೋಜನೆಗೆ ಚಾಲನೆ ನೀಡಿದೆ.

ವಹಿವಾಟನ್ನು ಮುಂದುವರಿಸಿಕೊಂಡು ಹೋಗಲು ಅಗತ್ಯವಿರುವ ದುಡಿಯುವ ಬಂಡವಾಳವನ್ನು ತಕ್ಷಣವೇ ಒದಗಿಸುವ ಯೋಜನೆ ಇದಾಗಿದೆ. ಏಳರಿಂದ 14 ದಿನಗಳ ಅವಧಿಗೆ ₹ 1 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ. ಗ್ರಾಹಕರ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಸದ್ಯದ ಮಟ್ಟಿಗೆ ಸಾಲ ಸೌಲಭ್ಯ ಒದಗಿಸುವ ಪ್ರಕ್ರಿಯೆಗೆ ಕನಿಷ್ಠ ಶುಲ್ಕವನ್ನಷ್ಟೇ ಪಡೆಯಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಆದರೆ ಶುಲ್ಕದ ಪ್ರಮಾಣವನ್ನು ತಿಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT