ಬೆಂಗಳೂರು: ವ್ಯಕ್ತಿಯೊಬ್ಬರು ಒಂದೇ ವರ್ಷದಲ್ಲಿ ₹ 17.78 ಲಕ್ಷವನ್ನು ಇನ್‌ಸ್ಟಾಮಾರ್ಟ್‌ನಲ್ಲಿ ವ್ಯಯಿಸಿದ್ದಾರೆ ಎಂದು ಕ್ವಿಕ್ ಕಾಮರ್ಸ್ ಇನ್‌ಸ್ಟಾಮಾರ್ಟ್ 'ಹೌ ಇಂಡಿಯಾ ಇನ್‌ಸ್ಟಾ ಮಾರ್ಟೆಡ್ 2025' ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಈ ಕುರಿತು ಮಾತನಾಡಿರುವ ಸ್ವಿಗ್ಗಿ ಸಿಒಒ ಹರಿ ಕುಮಾರ್ ಗೋಪಿನಾಥನ್, 'ಬ್ಯುಸಿ ಜೀವನ ನಡೆಸುತ್ತಿರುವ ಬೆಂಗಳೂರಿಗರ ದೈನಂದಿನ ಅಗತ್ಯತೆಗಳನ್ನು ಪೂರೈಸಲು ಕ್ವಿಕ್ ಕಾರ್ಮ್ ಕಾಮಧೇನು ಆಗಿದೆ' ಎಂದು ಹೇಳಿದ್ದಾರೆ.
ಇನ್‌ಸ್ಟಾಮಾರ್ಟ್ ಬಳಕೆದಾರರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಈ ವರ್ಷದಲ್ಲಿ ಯಾವೆಲ್ಲಾ ವಸ್ತುಗಳನ್ನು ಜನರು ಹೆಚ್ಚಾಗಿ ಖರೀದಿಸಿದ್ದಾರೆ, ಯಾರು ಹೆಚ್ಚು ವ್ಯಹಿಸಿದ್ದಾರೆ? ಯಾವ ಪದಾರ್ಥಗಳಿಗೆ ಹೆಚ್ಚು ಬೇಡಿಕೆ ಇತ್ತು ಎಂಬ ವರದಿಯನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ವರದಿಯ ಪ್ರಕಾರ, ಒಬ್ಬನೇ ವ್ಯಕ್ತಿ ಐಫೋನ್ ಸೇರಿದಂತೆ ಇತರೆ ದೈನಂದಿನ ಪದಾರ್ಥಗಳಿಗಾಗಿ ಒಂದು ವರ್ಷದಲ್ಲಿ ಬರೋಬ್ಬರಿ ₹ 17.78 ಲಕ್ಷ ವ್ಯಹಿಸಿದ್ದಾರೆ. ಇನ್ನು, ಡೆಲಿವರಿ ಬಾಯ್‌ಗಳಿಗೆ ಟಿಪ್ ನೀಡುವ ವಿಷಯದಲ್ಲೂ ಬೆಂಗಳೂರಿಗರು ದಾರಾಳರು ಎಂಬುದು ಸಾಬೀತಾಗಿದೆ. ವ್ಯಕ್ತಿಯೊಬ್ಬರು ಒಂದೇ ಬಾರಿಗೆ, ಬರೋಬ್ಬರಿ ₹ 68,600 ಅನ್ನು ಟಿಪ್ ರೂಪದಲ್ಲಿ ನೀಡಿದ್ದಾರೆ. ಚೆನ್ನೈನಲ್ಲಿ ಈ ಹಿಂದೆ ಒಬ್ಬರು ₹ 59,505 ಟಿಪ್ ನೀಡಿದ್ದ ಮೊತ್ತವನ್ನು ಮೀರಿದೆ ಎಂದು ಮಾಹಿತಿ ನೀಡಲಾಗಿದೆ.
ಕೊರಿಯನ್ ಆಹಾರವನ್ನೇ ಜನರು ಹೆಚ್ಚಾಗಿ ಆರ್ಡರ್ ಮಾಡಿಕೊಂಡಿದ್ದಾರೆ. ಇತರ ಪದಾರ್ಥಗಳಿಗೆ ಹೋಲಿಸಿದರೆ, ಎಲೆಕ್ಟ್ರಾನಿಕ್ಸ್ ಮತ್ತು ಆಟಿಕೆಗಳು ಕ್ರಮವಾಗಿ 59 ಪಟ್ಟು ಮತ್ತು 23 ಪಟ್ಟು ಹೆಚ್ಚು ಆರ್ಡರ್ ಆಗಿವೆ.
ಪ್ರೇಮಿಗಳ ದಿನದಂದು ಫೆರೆರೊ ರೋಷರ್ ಚಾಕೊಲೇಟ್‌ಗಳಿಗೆ ಇದ್ದ ಬೇಡಿಕೆ, ಕುಸಿದಿದೆ.
ಹಾಲಿಗಾಗಿ ದೇಶದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಆರ್ಡರ್ ಮಾಡಲಾಗುತ್ತದೆ. ಪ್ರತಿ ಸೆಕೆಂಡಿಗೆ 4 ಪ್ಯಾಕೆಟ್ ಹಾಲು ಆರ್ಡರ್ ಬರುತ್ತಿವೆ. ರಾತ್ರಿ ಸಮಯದಲ್ಲಿ ಖಾರ ಪದಾರ್ಥಗಳಿಗೆ ಬೇಡಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.