ADVERTISEMENT

ರಿಲಯನ್ಸ್‌ ಜಿಯೊದಲ್ಲಿ ಇಂಟೆಲ್‌ ₹1,894 ಕೋಟಿ ಹೂಡಿಕೆ

ಏಜೆನ್ಸೀಸ್
Published 3 ಜುಲೈ 2020, 3:54 IST
Last Updated 3 ಜುಲೈ 2020, 3:54 IST
ರಿಲಯನ್ಸ್ ಜಿಯೊ ಡಿಜಿಟಲ್‌
ರಿಲಯನ್ಸ್ ಜಿಯೊ ಡಿಜಿಟಲ್‌   

ಮುಂಬೈ: ವಿದೇಶಿ ಹೂಡಿಕೆಗಳಿಗೆ ತೆರೆದುಕೊಂಡಿರುವ ರಿಲಯನ್ಸ್‌ ಜಿಯೊದಲ್ಲಿ ಇಂಟೆಲ್‌ ಕ್ಯಾಪಿಟಲ್‌ ₹1,894.5 ಕೋಟಿ ಹೂಡಿಕೆ ಮಾಡಲಿದೆ. ಈ ಮೂಲಕ ಜಿಯೊ ಪಾಟ್‌ಫಾರ್ಮ್ಸ್‌ನ ಶೇ 0.39ರಷ್ಟು ಪಾಲುದಾರಿಕೆಯನ್ನು ಇಂಟೆಲ್‌ ಪಡೆಯಲಿದೆ ಎಂದು ರಿಯಲಯನ್ಸ್‌ ಮುಂಬೈ ಷೇರುಪೇಟೆಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.

ಹನ್ನೊಂದು ವಾರಗಳಲ್ಲಿ ಜಿಯೊ ಪಾಟ್‌ಫಾಮ್ಸ್‌ 12ನೇ ಹೂಡಿಕೆ ಪಡೆಯುತ್ತಿದೆ. ಇಂಟೆಲ್‌ ಜೊತೆಗಿನ ಶೇ 0.39ರಷ್ಟು ಪಾಲು ಒಪ್ಪಂದದಿಂದ ರಿಯಲನ್ಸ್‌ ಜಿಯೊ ಪ್ಲಾಟ್‌ಫಾರ್ಮ್ಸ್‌ನ ಒಟ್ಟು ಶೇ 25.09ರಷ್ಟು ಪಾಲು ಮಾರಾಟ ಮಾಡಿದಂತಾಗಿದೆ.

ಈವರೆಗೂ ರಿಲಯನ್ಸ್‌ ವಿದೇಶಿ ಕಂಪನಿಗಳ ಹೂಡಿಕೆಯಿಂದ ₹1,17,588.45 ಕೋಟಿ ಸಂಗ್ರಹಿಸಿದೆ. ರಿಯಲನ್ಸ್‌ ಭಾಗವಾಗಿರುವ ಜಿಯೊ ಪ್ಲಾಟ್‌ಫಾರ್ಮ್ಸ್‌ ಸುಮಾರು 38.8 ಕೋಟಿ ಗ್ರಾಹಕರನ್ನು ಹೊಂದಿದೆ.

ADVERTISEMENT

ತಂತ್ರಜ್ಞಾನ ಸಂಸ್ಥೆ ಫೇಸ್‌ಬುಕ್‌ ರಿಲಯನ್ಸ್‌ನಲ್ಲಿ ₹43,574 ಕೋಟಿ ಹೂಡಿಕೆಯ ಮೂಲಕ ಶೇ 9.99ರಷ್ಟು ಪಾಲುದಾರಿಕೆ ಪಡೆದಿದೆ. ಇದರೊಂದಿಗೆ ಸಿಲ್ವರ್‌ ಲೇಕ್‌ ಮತ್ತು ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್‌, ಜನರಲ್‌ ಅಟ್ಲಾಂಟಿಕ್‌, ಕೆಕೆಆರ್‌ ಹೂಡಿಕೆ ಸಂಸ್ಥೆ, ಅಬು–ಧಾಬಿ ಮೂಲದ ಮುಬದಲಾ, ಟಿಪಿಜಿ ಹಾಗೂ ಎಲ್‌. ಕ್ಯಾಟರ್‌ಟನ್‌ ಪಾಲು ಖರೀದಿ ಒಪ್ಪಂದ ಮಾಡಿಕೊಂಡಿವೆ. ಈಗಾಗಲೇ ರಿಲಯನ್ಸ್‌ ಜಿಯೊ ಸಾಲಮುಕ್ತ ಸಂಸ್ಥೆ ಎಂದು ಘೋಷಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.