ADVERTISEMENT

ಇಸ್ರೇಲ್‌ ಹೈಫಾ ಬಂದರು ಗೌತಮ್‌ ಅದಾನಿ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 18:06 IST
Last Updated 16 ಜುಲೈ 2022, 18:06 IST
ಗೌತಮ್‌ ಅದಾನಿ
ಗೌತಮ್‌ ಅದಾನಿ   

ಬೆಂಗಳೂರು: ಇಸ್ರೇಲ್‌ ಹೈಫಾ ಬಂದರು ಖಾಸಗೀಕರಣದ ಟೆಂಡರ್‌ ತಮಗೆ ದೊರೆತಿರುವುದಾಗಿ ಉದ್ಯಮಿ ಗೌತಮ್‌ ಅದಾನಿ ಟ್ವೀಟ್‌ ಮಾಡಿದ್ದಾರೆ.

‘ಈ ಬಂದರಿನ ಖಾಸಗಿಕರಣ ಗುತ್ತಿಗೆ ನಮ್ಮ ಪಾಲುದಾರ ಗಡೋಟ್ ಸಮೂಹದೊಂದಿಗೆ ಪಡೆದಿರುವುದು ಸಂತೋಷ ನೀಡಿದೆ. ಎರಡೂ ದೇಶಗಳಿಗೆ ಭದ್ರತೆ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದಾಗಿದೆ’ ಎಂದು ಅದಾನಿ ಹೇಳಿದ್ದಾರೆ.

‘ನಮ್ಮ ಪಾಲುದಾರರಾದಇಸ್ರೇಲ್‌ನ ರಾಸಾಯನಿಕ ಮತ್ತು ಸರಕು ಸಮೂಹದ ಗಡೋಟ್‌ ಜತೆಗೆ ಹೈಫಾ ಬಂದರನ್ನು ತೆಕ್ಕೆಗೆ ತೆಗೆದುಕೊಂಡಿರುವುದು ಕಂಪನಿಯ ಭಾರತೀಯ ಬಂದರುಗಳೊಂದಿಗೆ ವ್ಯಾಪಾರದ ಮಾರ್ಗಗಳನ್ನು ವಿಸ್ತರಿಸುತ್ತದೆ. ಯುರೋಪ್ ಮತ್ತು ಮಧ್ಯಪ್ರಾಚ್ಯದ ದೇಶಗಳಿಗೂ ಇದು ಉತ್ತಮ ಸಂಪರ್ಕ ಕಲ್ಪಿಸುತ್ತದೆ’ ಎಂದು ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್‌ ಎಕಾನಮಿಕ್‌ ಜೋನ್‌ ಹೇಳಿದೆ.

ADVERTISEMENT

‘ಬಂದರು ಅಭಿವೃದ್ಧಿ ಮತ್ತು ಕಾರ್ಯಾಚರಣೆಯಲ್ಲಿಭಾರತದಲ್ಲಿ ಅತಿದೊಡ್ಡ ಕಂಪನಿಯಾಗಿರುವ ಪೋರ್ಟ್ಸ್, ಯುರೋಪಿನ ಬಂದರು ವಲಯಕ್ಕೆ ತನ್ನ ಹೆಜ್ಜೆಗುರುತನ್ನು ವಿಸ್ತರಿಸಿದೆ’ ಎಂದು ಅದು ಹೇಳಿದೆ.

ಎರಡು ವರ್ಷಗಳಿಂದ ನಡೆಯುತ್ತಿದ್ದ ಈ ಟೆಂಡರ್‌ ಪ್ರಕ್ರಿಯೆ ₹944 ಕೋಟಿಗೆ ಅದಾನಿ ಪೋರ್ಟ್ಸ್ ಮತ್ತು ಗಡೋಟ್‌ ಪಾಲಾಗಿದೆ ಎಂದು ಇಸ್ರೇಲ್‌ ಗುರುವಾರ ಅಧಿಕೃತವಾಗಿ ಘೋಷಣೆ ಮಾಡಿತ್ತು. ಹೈಫಾ ಬಂದರು ಖಾಸಗಿಕರಣ ಗುತ್ತಿಗೆಯಲ್ಲಿಅದಾನಿ ಪೋರ್ಟ್ಸ್ ಶೇ 70 ಪಾಲು ಮತ್ತು ಗಡೋಟ್‌ ಶೇ 30 ಪಾಲು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.