ನವದೆಹಲಿ: ಆದಾಯ ತೆರಿಗೆ ಇಲಾಖೆಯು ಪುಣೆ ಮೂಲದ ತಂಬಾಕು ಮಾರಾಟ ಕಂಪನಿಯೊಂದರ ಮೇಲೆ ದಾಳಿ ನಡೆಸಿ, ₹ 335 ಕೋಟಿ ಮೌಲ್ಯದ ಕಪ್ಪುಹಣವನ್ನು ಪತ್ತೆ ಮಾಡಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ತಿಳಿಸಿದೆ.
ಫೆಬ್ರುವರಿ 17ರಿಂದ ಮಹಾರಾಷ್ಟ್ರದ 34 ಕಡೆಗಳಲ್ಲಿ ಶೋಧ ಆರಂಭವಾಗಿತ್ತು.
ಮಧ್ಯಪ್ರದೇಶದ ಸೋಯಾ ಉತ್ಪನ್ನಗಳ ತಯಾರಿಕಾ ಸಮೂಹವೊಂದರ ಮೇಲೆ ನಡೆಸಿದ ದಾಳಿಯಲ್ಲಿ ಆದಾಯ ತೆರಿಗೆ ಇಲಾಖೆಯು ಒಟ್ಟು ₹ 450 ಕೋಟಿ ಅಘೋಷಿತ ಆದಾಯವನ್ನು ಪತ್ತೆ ಮಾಡಿದೆ.
‘ಲ್ಯಾಪ್‌ಟಾಪ್, ಹಾರ್ಡ್ ಡ್ರೈವ್, ಪೆನ್ ಡ್ರೈವ್‌ಗಳಲ್ಲಿ ಮಹತ್ವದ ದಾಖಲೆಗಳು ಲಭ್ಯವಾಗಿವೆ. ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಸಿಬಿಡಿಟಿ ಪ್ರಕಟಣೆ ತಿಳಿಸಿದೆ. ₹ 8 ಕೋಟಿ ಮೌಲ್ಯದ ನಗದು ಕೂಡ ಪತ್ತೆಯಾಗಿದೆ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.