ADVERTISEMENT

ಹಣದುಬ್ಬರದ ನಡುವೆಯೂ ಬೆಳವಣಿಗೆ: ಐಟಿಸಿ ವಿಶ್ವಾಸ

ಪಿಟಿಐ
Published 20 ಜುಲೈ 2022, 15:29 IST
Last Updated 20 ಜುಲೈ 2022, 15:29 IST
ಸಂಜೀವ್ ಪುರಿ
ಸಂಜೀವ್ ಪುರಿ   

ಕೋಲ್ಕತ್ತ: ಹಣದುಬ್ಬರ ಏರಿಕೆಯ ನಡುವೆಯೂ ತನ್ನ ವಹಿವಾಟುಗಳು ಬೆಳವಣಿಗೆ ಕಾಣಲಿವೆ ಎಂದು ಐಟಿಸಿ ಲಿಮಿಟೆಡ್ ವಿಶ್ವಾಸ ವ್ಯಕ್ತಪಡಿಸಿದೆ.

ಕಂಪನಿಯ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಸಿಎಂಡಿ ಸಂಜೀವ್ ಪುರಿ, ‘ಎಫ್‌ಎಂಸಿಜಿ ವಲಯದಲ್ಲಿ ನಾವು 25 ಬ್ರ್ಯಾಂಡ್‌ಗಳನ್ನು ಬೆಳೆಸಿದ್ದೇವೆ. ಹೊಸ ಬ್ರ್ಯಾಂಡ್‌ಗಳು ವಾರ್ಷಿಕ ಒಟ್ಟು ₹ 24 ಸಾವಿರ ಕೋಟಿ ಮೌಲ್ಯದ ವಹಿವಾಟು ಸಾಧ್ಯವಾಗಿಸಲಿವೆ’ ಎಂದು ಹೇಳಿದ್ದಾರೆ.

ಎಫ್‌ಎಂಸಿಜಿ ಬ್ರ್ಯಾಂಡ್‌ಗಳನ್ನು ವಿದೇಶಿ ಮಾರುಕಟ್ಟೆಗಳಿಗೂ ಕೊಂಡೊಯ್ಯುವ ಮಹತ್ವಾಕಾಂಕ್ಷೆ ಐಟಿಸಿ ಕಂಪನಿಗೆ ಇದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ರೀತಿಯಲ್ಲಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕಂಪನಿಯು ಹೂಡಿಕೆ ಮಾಡಲಿದೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಈ ವರ್ಷದಲ್ಲಿ ಕಂಪನಿಯು 110 ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿರುವುದರ ಪರಿಣಾಮವಾಗಿ ಕಂಪನಿಯ ಸಾಂಪ್ರದಾಯಿಕ ಸಿಗರೇಟ್ ವಹಿವಾಟು ಕೋವಿಡ್‌ ಪೂರ್ವದ ಮಟ್ಟಕ್ಕಿಂತ ಮೇಲಕ್ಕೆ ಬಂದಿದೆ. ಆದರೆ, ಕಳ್ಳಮಾರ್ಗದ ಮೂಲಕ ದೇಶದೊಳಕ್ಕೆ ಬರುತ್ತಿರುವ ಸಿಗರೇಟುಗಳ ಕಾರಣದಿಂದಾಗಿ ಕಾನೂನುಬದ್ಧವಾಗಿ ಸಿಗರೇಟ್ ವಹಿವಾಟು ನಡೆಸುವುದಕ್ಕೆ ಧಕ್ಕೆ ಆಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.