ಬೆಂಗಳೂರು: ಯೂನಿವರ್ಸಲ್ ಬ್ಯಾಂಕಿಂಗ್ ಪರವಾನಗಿ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ‘ಜನ ಸ್ಮಾಲ್ ಫೈನಾನ್ಸ್’ ಬ್ಯಾಂಕ್ ಅರ್ಜಿ ಸಲ್ಲಿಸಿದೆ.
‘ಯೂನಿವರ್ಸಲ್ ಬ್ಯಾಂಕಿಂಗ್ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಉತ್ತಮ ಸೇವೆ ಸಲ್ಲಿಸುವುದು ಮತ್ತು ಎಲ್ಲರನ್ನೂ ಒಳಗೊಳ್ಳುವುದು ನಮ್ಮ ಗುರಿಯಾಗಿದೆ. ಯೂನಿವರ್ಸಲ್ ಬ್ಯಾಂಕ್ ಆಗುವುದರಿಂದ ಗ್ರಾಹಕರಿಗೆ ಹೆಚ್ಚಿನ ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಜಯ್ ಕನ್ವಾಲ್ ಹೇಳಿದ್ದಾರೆ.
2017ರಲ್ಲಿ ಎಸ್‌ಎಫ್‌ಬಿ ಪರವಾನಗಿ ಪಡೆದಾಗಿನಿಂದ ಬ್ಯಾಂಕ್ ವೈಯಕ್ತಿಕ, ಎಂಎಸ್‌ಎಂಇ ಮತ್ತು ಸಂಸ್ಥೆಗಳಿಗೆ ಠೇವಣಿಗಳು, ಸಾಲಗಳು ಮತ್ತು ಆರ್ಥಿಕ ಸೇವೆಗಳ ದೃಢವಾದ ಪೋರ್ಟ್‌ಫೋಲಿಯೋವನ್ನು ರೂಪಿಸಿದೆ. ಠೇವಣಿಯಲ್ಲಿ ಹೆಚ್ಚಳ, ಡಿಜಿಟಲ್ ಸೇವೆ ಮತ್ತು ಗುಣಮಟ್ಟದ ಸೇವೆಯಿಂದ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.