ADVERTISEMENT

ಜಿಯೋ ಬ್ಲ್ಯಾಕ್‌ರಾಕ್‌: ₹17 ಸಾವಿರ ಕೋಟಿ ಹೂಡಿಕೆ

ಪಿಟಿಐ
Published 7 ಜುಲೈ 2025, 14:35 IST
Last Updated 7 ಜುಲೈ 2025, 14:35 IST
ಜಿಯೋ ಬ್ಲ್ಯಾಕ್‌ರಾಕ್ ಲೋಗೊ
ಜಿಯೋ ಬ್ಲ್ಯಾಕ್‌ರಾಕ್ ಲೋಗೊ   

ನವದೆಹಲಿ: ಜಿಯೊ ಫೈನಾನ್ಸಿಯಲ್‌ ಸರ್ವಿಸಸ್ ಲಿಮಿಟೆಡ್ ಮತ್ತು ಅಮೆರಿಕದ ಬ್ಲ್ಯಾಕ್‌ರಾಕ್‌ ಜಂಟಿ ಪಾಲುದಾರಿಕೆಯ ಜಿಯೊ ಬ್ಲ್ಯಾಕ್‌ರಾಕ್‌ ಅಸೆಟ್‌ ಮ್ಯಾನೇಜ್ಮೆಂಟ್‌ ಕಂಪನಿಯು ತನ್ನ ಆರಂಭಿಕ ಮೂರು ಮ್ಯೂಚುವಲ್‌ ಫಂಡ್‌ಗಳ ಮೂಲಕ ₹17,800 ಕೋಟಿ ಹೂಡಿಕೆ ಸಂಗ್ರಹಿಸಿರುವುದಾಗಿ ತಿಳಿಸಿದೆ.

ಒಟ್ಟು ಮೂರು ಹೊಸ ಮ್ಯೂಚುವಲ್‌ ಫಂಡ್‌ಗಳ ಮೂಲಕ ಕಂಪನಿಯು ಈ ಮೊತ್ತದ ಹೂಡಿಕೆ ಸಂಗ್ರಹಿಸಿದೆ. ಹೊಸ ಫಂಡ್‌ಗಳಲ್ಲಿ ಆರಂಭಿಕ ಹಂತದಲ್ಲಿ ಹೂಡಿಕೆ ಮಾಡಲು ಮೂರು ದಿನಗಳ ಅವಕಾಶ ನೀಡಲಾಗಿತ್ತು. 90ಕ್ಕೂ ಹೆಚ್ಚು ಸಾಂಸ್ಥಿಕ ಹೂಡಿಕೆದಾರರು ಹಣ ತೊಡಗಿಸಿದ್ದಾರೆ. ಇದು ಜಿಯೊ ಬ್ಲ್ಯಾಕ್‌ರಾಕ್‌ ಅಸೆಟ್‌ ಮ್ಯಾನೇಜ್ಮೆಂಟ್‌ನಲ್ಲಿ ಅವರಿಗೆ ಇರುವ ವಿಶ್ವಾಸವನ್ನು ತೋರಿಸುತ್ತಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಈ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವಲ್ಲಿ ಸಣ್ಣ ಹೂಡಿಕೆದಾರರೂ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಎನ್‌ಎಫ್ಒ ಅವಧಿಯಲ್ಲಿ 67 ಸಾವಿರಕ್ಕೂ ಹೆಚ್ಚು ಮಂದಿ ಹಣ ತೊಡಗಿಸಿದ್ದಾರೆ ಎಂದು ಕಂಪನಿ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.