
ಬೆಂಗಳೂರು: ಗೂಗಲ್ ಕಂಪನಿಯ ಎ.ಐ. ಪರಿಕರ ‘ಗೂಗಲ್ ಎ.ಐ. ಪ್ರೊ’ ಚಂದಾದಾರಿಕೆಯು ಅರ್ಹ ಜಿಯೊ ಬಳಕೆದಾರರಿಗೆ 18 ತಿಂಗಳು ಉಚಿತವಾಗಿ ಸಿಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಗುರುವಾರ ತಿಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಇಂಟೆಲಿಜೆನ್ಸ್, ಗೂಗಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲುದಾರಿಕೆಯ ಮೂಲಕ ರಿಲಯನ್ಸ್, ಜಿಯೊ 5ಜಿ ಅನ್‌ಲಿಮಿಟೆಡ್ ಯೋಜನೆ ಹೊಂದಿರುವ ಬಳಕೆದಾರರಿಗೆ ಈ ಕೊಡುಗೆ ನೀಡಿದೆ. ಹಣಕಾಸಿನ ಮೌಲ್ಯದಲ್ಲಿ ಈ ಕೊಡುಗೆ ಬೆಲೆ ₹35,100 ಆಗಿದೆ ಎಂದು ಕಂಪನಿ ಹೇಳಿದೆ.
ಆರಂಭಿಕವಾಗಿ 18–25 ವರ್ಷದ ನಡುವಿನವರಿಗೆ ಈ ಕೊಡುಗೆ ದೊರೆಯಲಿದೆ. ನಂತರ ಎಲ್ಲ ಬಳಕೆದಾರರಿಗೆ ಈ ಸೇವೆ ದೊರೆಯುವಂತೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಈ ಪ್ಲ್ಯಾನ್ ಜೊತೆಗೆ ಗೂಗಲ್ ಜೆಮಿನಿ 2.5 ಪ್ರೊ, ಇತ್ತೀಚಿನ ನ್ಯಾನೋ ಬನಾನಾ ಮತ್ತು ವಿಯೋ 3.1 ಮಾದರಿಗಳೊಂದಿಗೆ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಲು ಬಳಕೆದಾರರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.
ಅಧ್ಯಯನ ಮತ್ತು ಸಂಶೋಧನೆಗಾಗಿ ನೋಟ್‌ಬುಕ್ ಎಲ್ಎಂಗೆ ಹೆಚ್ಚಿನ ಅವಕಾಶ ಮತ್ತು 2 ಟಿಬಿ ಕ್ಲೌಡ್ ಸಂಗ್ರಹದ ಸೌಲಭ್ಯ ಕೂಡ ದೊರೆಯಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.