
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಸ್ವಾಮ್ಯದ ಅಂಗಸಂಸ್ಥೆಯಾದ ರಿಲಯನ್ಸ್ ಸ್ಟ್ರಾಟೆಜಿಕ್ ಬ್ಯುಸಿನೆಸ್ ವೆಂಚರ್ಸ್ ಲಿಮಿಟೆಡ್ (ಆರ್‌ಎಸ್‌ಬಿವಿಎಲ್), ಸಿಖ್ಯಾ ಎಂಟರ್‌ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಶೇ 50.1 ರಷ್ಟು ಈಕ್ವಿಟಿ ಪಾಲನ್ನು ಸ್ವಾಧೀನಪಡಿಸಿಕೊಂಡಿದೆ.
₹150 ಕೋಟಿಯ ಈ ಪಾಲುದಾರಿಕೆ ಫೆ.2ರಂದು ಪೂರ್ಣಗೊಂಡಿದೆ.
ಆಸ್ಕರ್ ಪ್ರಶಸ್ತಿ ಮತ್ತು ಹಲವಾರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿರುವ ದೇಶದ ಏಕೈಕ ನಿರ್ಮಾಣ ಕಂಪನಿ ಸಿಖ್ಯಾ, ದಶಕದಲ್ಲಿ ಅನೇಕ ಭಾರತೀಯ ಸಿನಿಮಾಗಳಿಗೆ ಜಾಗತಿಕ ಮಟ್ಟದಲ್ಲಿ ಗುರುತು ತಂದುಕೊಟ್ಟಿದೆ.
ಧುರಂಧರ್, ಮಿಸ್ಸಿಂಗ್ ಲೇಡೀಸ್ ಮತ್ತು ಸ್ತ್ರೀ 2ನಂತಹ ಭಾರತೀಯ ಸಿನಿಮಾಗಳನ್ನು ಜಗತ್ತಿನ ವಿವಿಧ ದೇಶಗಳಲ್ಲಿ ವೀಕ್ಷಣೆಗೆ ಸಿಗುವಂತೆ ಮಾಡಿರುವುದು ಜಿಯೋ ಸ್ಟುಡಿಯೋಸ್.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಯೋ ಸ್ಟುಡಿಯೋಸ್ ಅಧ್ಯಕ್ಷೆ ಜ್ಯೋತಿ ದೇಶಪಾಂಡೆ, ‘ಸಿಖ್ಯಾ ಎಂಟರ್‌ಟೈನ್ಮೆಂಟ್ ಯಾವಾಗಲೂ ಭಾರತೀಯ ಮತ್ತು ಜಾಗತಿಕ ಪ್ರೇಕ್ಷಕರಿಗೆ ಉತ್ತಮ ಕಥೆಗಳನ್ನು ನೀಡಿದೆ. ಈ ಪಾಲುದಾರಿಕೆಯು ಸೃಜನಶೀಲತೆ ಮತ್ತು ಸಂಸ್ಕೃತಿಯನ್ನು ಗೌರವಿಸುವ ಸೃಷ್ಟಿಕರ್ತರೊಂದಿಗೆ ಕೆಲಸ ಮಾಡುವ ನಮ್ಮ ದೀರ್ಘಕಾಲೀನ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ’ ಎಂದಿದ್ದಾರೆ.
ಸಿಖ್ಯಾ ಎಂಟರ್‌ಟೈನ್ಮೆಂಟ್ ಸಂಸ್ಥಾಪಕ ಗುನೀತ್ ಮೊಂಗಾ ಕಪೂರ್ ಮತ್ತು ಅಚಿನ್ ಜೈನ್ ಮಾತನಾಡಿ, ‘ಕಥೆ, ಸಂಸ್ಕೃತಿ, ಭಾಷೆಗಳು ಗಡಿಯನ್ನು ಮೀರಿ ಜನರನ್ನು ಸಂಪರ್ಕಿಸುವ ಶಕ್ತಿಯನ್ನು ಹೊಂದಿದೆ ಎನ್ನುವುದನ್ನು ನಂಬುತ್ತೇವೆ. ಜಿಯೋ ಸ್ಟುಡಿಯೋಸ್‌ನೊಂದಿಗಿನ ಈ ಪಾಲುದಾರಿಕೆಯು ನಮ್ಮ ಕಥೆಗಳನ್ನು ಜಾಗತಿಕ ಪ್ರೇಕ್ಷಕರ ಬಳಿಗೆ ಕೊಂಡೊಯ್ಯಲು ಮತ್ತು ದೇಶದಾದ್ಯಂತ ಇರುವ ಹೊಸ ಪ್ರತಿಭೆಗಳನ್ನು ಮುನ್ನೆಲೆಗೆ ತರಲು ಅವಕಾಶ ನೀಡುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.