ಬೆಂಗಳೂರು:ರಿಲಯನ್ಸ್ ರಿಟೇಲ್ ಕಂಪನಿಯು ಶನಿವಾರದಿಂದ ಬುಧವಾರದವರೆಗೆ ‘ಫುಲ್ ಪೈಸಾ ವಸೂಲ್ ಸೇಲ್’ ಹೆಸರಿನಲ್ಲಿ ದಿನಸಿ ವಸ್ತುಗಳ ಮಾರಾಟ ಮೇಳ ಆಯೋಜಿಸಿದೆ.
ಕಂಪನಿಯ ಇ–ಮಾರುಕಟ್ಟೆಯಾದ ಜಿಯೊಮಾರ್ಟ್‌ನಲ್ಲಿ ಈ ಮೇಳ ನಡೆಯುತ್ತಿದೆ. ಅಲ್ಲದೆ, ಸುಪರ್ ಸ್ಮಾರ್ಟ್ ಸ್ಟೋರ್‌ಗಳಲ್ಲಿ, ರಿಲಯನ್ಸ್ ಫ್ರೆಷ್‌ನಲ್ಲಿ, ಸ್ಮಾರ್ಟ್ ಪಾಯಿಂಟ್‌ಗಳಲ್ಲಿ ಕೂಡ ಖರೀದಿಸಬಹುದಾಗಿದೆ. ಮೇಳದಲ್ಲಿ ಭಾರಿ ಉಳಿತಾಯ ಮಾಡುವ ಅವಕಾಶಗಳು ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿವೆ.
ಬಿಸ್ಕತ್, ಚಾಕೊಲೇಟ್ ಮತ್ತು ಶಾಂಪು ಮೇಲೆ ಶೇ 50ರವರೆಗೆ ರಿಯಾಯಿತಿ, ತಂಪು ಪಾನೀಯಗಳು, ತೂತ್‌ಪೇಸ್ಟ್ ಮತ್ತು ಸೋಪ್ ಮೇಲೆ ಕನಿಷ್ಠ ಶೇ 33ರಷ್ಟು ರಿಯಾಯಿತಿ ಸಿಗಲಿದೆ. ಜಿಯೊಮಾರ್ಟ್‌ನ ಮೂಲಕ ಖರೀದಿ ಮಾಡುವವರಿಗೆ, ವಸ್ತುಗಳನ್ನು ಉಚಿತವಾಗಿ ಅವರ ಮನೆಗೆ ತಲುಪಿಸಲಾಗುತ್ತದೆ. ಕನಿಷ್ಠ ಮೊತ್ತದ ವಸ್ತುಗಳನ್ನು ಖರೀದಿಸಬೇಕು ಎಂದು ಷರತ್ತು ಇಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.