ADVERTISEMENT

ಜೋಯಾಲುಕ್ಕಾಸ್‌: ಮಜೂರಿ ಮೇಲೆ ಶೇ 50ರಷ್ಟು ರಿಯಾಯಿತಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 13:28 IST
Last Updated 12 ಫೆಬ್ರುವರಿ 2025, 13:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಜೋಯಾಲುಕ್ಕಾಸ್‌ನಿಂದ ವರ್ಷದ ಅತಿದೊಡ್ಡ ಆಭರಣ ಮಾರಾಟದ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆ ಪ್ರಕಟಿಸಲಾಗಿದೆ.

ಜೋಯಾಲುಕ್ಕಾಸ್‌ನ ಮಳಿಗೆಗಳಲ್ಲಿ ಎಲ್ಲಾ ಆಭರಣಗಳ ಮಜೂರಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಮಾರ್ಚ್‌ 9ರ ವರೆಗೆ ಈ ಕೊಡುಗೆ ಇರಲಿದೆ. ಈ ವಿಶೇಷ ಕೊಡುಗೆಯ ಜೊತೆಗೆ, ಗ್ರಾಹಕರಿಗೆ ಪ್ರತಿ ಖರೀದಿಯೊಂದಿಗೆ ಉಚಿತ ಆಜೀವ ಪರ್ಯಂತ ನಿರ್ವಹಣೆ, ಒಂದು ವರ್ಷದ ಉಚಿತ ವಿಮೆ ಮತ್ತು ಮರುಖರೀದಿ ಖಾತರಿ ನೀಡಲಾಗುತ್ತಿದೆ ಎಂದು ತಿಳಿಸಿದೆ.

ಚಿನ್ನ, ವಜ್ರ, ಕತ್ತರಿಸದ ವಜ್ರ, ಹರಳು, ಪ್ಲಾಟಿನಂ ಮತ್ತು ಬೆಳ್ಳಿ ಆಭರಣಗಳಿಗೆ ರಿಯಾಯಿತಿ ಸಿಗಲಿದೆ. ಗ್ರಾಹಕರು ಹತ್ತಿರದ ಜೋಯಾಲುಕ್ಕಾಸ್‌ನ ಮಳಿಗೆಗೆ ಭೇಟಿ ನೀಡಿ ಈ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.