ಬೆಂಗಳೂರು: ಚಿನ್ನಾಭರಣ ಕಂಪನಿ ಜೋಯಾಲುಕ್ಕಾಸ್, ಈ ಬಾರಿಯ ದೀಪಾವಳಿ ಹಬ್ಬಕ್ಕಾಗಿ ತನ್ನ ಗ್ರಾಹಕರಿಗೆ ಒಟ್ಟು ₹ 100 ಕೋಟಿ ಮೌಲ್ಯದ ಗಿಫ್ಟ್ ವೋಚರ್‌ಗಳನ್ನು ನೀಡಲಿದೆ.
‘ಈ ವರ್ಷ ನಮ್ಮ ಗ್ರಾಹಕರಿಗೆ ಉಚಿತ ಗಿಫ್ಟ್ ವೋಚರ್‌ಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ. ಇದನ್ನು ಅವರು ಹೆಚ್ಚಿನ ಆಭರಣ ಖರೀದಿಸಲು ಬಳಸಬಹುದು’ ಎಂದು ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಜಾಯ್ ಅಲುಕ್ಕಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕೊಡುಗೆ ಅಡಿಯಲ್ಲಿ, ಗ್ರಾಹಕರಿಗೆ ₹ 50 ಸಾವಿರ ಮೌಲ್ಯದ ಚಿನ್ನದ ಆಭರಣಗಳ ಖರೀದಿಯ ಮೇಲೆ ₹ 1000 ಮೊತ್ತದ ಗಿಫ್ಟ್ ವೋಚರ್ ನೀಡಲಾಗುವುದು. ವಜ್ರಾಭರಣ ಪ್ರಿಯರಿಗೆ ₹ 25 ಸಾವಿರ ಮೌಲ್ಯದ ಡೈಮಂಡ್, ಅನ್‌ಕಟ್ ಮತ್ತು ಅಮೂಲ್ಯ ರತ್ನಗಳ ಖರೀದಿಯ ಮೇಲೆ ₹ 1000 ಮೊತ್ತದ ಗಿಫ್ಟ್ ವೋಚರ್; ₹ 10 ಸಾವಿರ ಮೌಲ್ಯದ ಬೆಳ್ಳಿ ಸಾಮಗ್ರಿ ಖರೀದಿಯ ಮೇಲೆ ₹ 500 ಮೊತ್ತದ ಗಿಫ್ಟ್ ವೋಚರ್ ಬಹುಮಾನವಾಗಿ ನೀಡಲಾಗುತ್ತದೆ. ಎಸ್‌ಬಿಐ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿಯಾಗಿ ಶೇಕಡ 5ರಷ್ಟು ಕ್ಯಾಶ್‌ಬ್ಯಾಕ್ ಗಳಿಸುವ ಅವಕಾಶ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನವೆಂಬರ್ 5ರವರೆಗೆ ಇದು ಜಾರಿಯಲ್ಲಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.