ನವದೆಹಲಿ: ಜೆಎಸ್‌ಡಬ್ಲ್ಯು ಎಂಜಿ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿ ಅನುರಾಗ್ ಮೆಹ್ರೋತ್ರಾ ನೇಮಕ ಆಗಿದ್ದಾರೆ.
ಮೂರು ದಶಕದ ವೃತ್ತಿ ಅನುಭವ ಇರುವ ಮೆಹ್ರೋತ್ರಾ, ಆಟೊಮೋಟಿವ್ ಕ್ಷೇತ್ರದಲ್ಲಿ ಮಾರಾಟ, ಮಾರ್ಕೆಟಿಂಗ್, ಬ್ಯುಸಿನೆಸ್ ಡೆವಲಪ್‌ಮೆಂಟ್ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಕಂಪನಿ ಸೋಮವಾರ ತಿಳಿಸಿದೆ.
ಮೆಹ್ರೋತ್ರಾ ಅವರು ಇದಕ್ಕೂ ಮೊದಲು ಟಾಟಾ ಮೋಟರ್ಸ್‌ನ ವಾಣಿಜ್ಯ ವಾಹನ ವಿಭಾಗದ ಕಾರ್ಯತಂತ್ರ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಉಪಾಧ್ಯಕ್ಷ ಮತ್ತು ಫೋರ್ಡ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.