ADVERTISEMENT

ರಿಲಯನ್ಸ್‌ ಸ್ವತಂತ್ರ ನಿರ್ದೇಶಕರಾಗಿ ಕಾಮತ್

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 19:45 IST
Last Updated 4 ನವೆಂಬರ್ 2022, 19:45 IST
   

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಕಂಪನಿಯ ಆಡಳಿತ ಮಂಡಳಿಯು, ಹಿರಿಯ ಬ್ಯಾಂಕರ್ ಕೆ.ವಿ. ಕಾಮತ್ ಅವರನ್ನು ಮಂಡಳಿಯ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲು ಶಿಫಾರಸು ಮಾಡಿದೆ. ಈ ನೇಮಕಕ್ಕೆ ಷೇರುದಾರರ ಸಮ್ಮತಿ ಬೇಕಿದೆ. ಕಾಮತ್ ಅವರು ಕುಂದಾಪುರ ಮೂಲದವರು.

ಕಾಮತ್ ಅವರನ್ನು ಐದು ವರ್ಷಗಳ ಅವಧಿಗೆ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲು ಶುಕ್ರವಾರ ನಡೆದ ಆಡಳಿತ ಮಂಡಳಿ ಸಭೆಯು ಶಿಫಾರಸು ಮಾಡಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಆರ್‌ಐಎಲ್‌ನ ಹಣಕಾಸು ಸೇವಾ ಅಂಗಸಂಸ್ಥೆಯಾಗಿರುವ ರಿಲಯನ್ಸ್ ಸ್ಟ್ರ್ಯಾಟೆಜಿಕ್ ಇನ್ವೆಸ್ಟ್‌ಮೆಂಟ್ಸ್‌ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ಹಾಗೂ ಸ್ವತಂತ್ರ ನಿರ್ದೇಶಕರನ್ನಾಗಿಯೂ ನೇಮಕ ಮಾಡಲಾಗಿದೆ. ಈ ಕಂಪನಿಯನ್ನು ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಎಂದು ಮರುನಾಮಕರಣ ಮಾಡಿ, ಷೇರುಪೇಟೆಯಲ್ಲಿ ನೋಂದಾಯಿಸಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.