ADVERTISEMENT

ಕಿಯಾ ಮೋಟರ್ಸ್‌ನ ಎಸ್‌ಯುವಿ ಸೆಲ್ಟೋಸ್

ಪಿಟಿಐ
Published 21 ಜೂನ್ 2019, 19:45 IST
Last Updated 21 ಜೂನ್ 2019, 19:45 IST
ಕಂಪನಿಯ ಅಧ್ಯಕ್ಷ ಹಾನ್‌ ವು ಪಾರ್ಕ್‌, ವ್ಯವಸ್ಥಾಪಕ ನಿರ್ದೇಶಕ ಕೂಖ್ಯಾವುನ್‌ ಶಿಮ್ ಮತ್ತು ಉಪಾಧ್ಯಕ್ಷ ಮನೋಹರ್‌ ಭಟ್ ಅವರು ಎಸ್‌ಯುವಿ ಸೆಲ್ಟೋಸ್‌ ಅನಾವರಣಗೊಳಿಸಿದರು –ಪಿಟಿಐ ಚಿತ್ರ
ಕಂಪನಿಯ ಅಧ್ಯಕ್ಷ ಹಾನ್‌ ವು ಪಾರ್ಕ್‌, ವ್ಯವಸ್ಥಾಪಕ ನಿರ್ದೇಶಕ ಕೂಖ್ಯಾವುನ್‌ ಶಿಮ್ ಮತ್ತು ಉಪಾಧ್ಯಕ್ಷ ಮನೋಹರ್‌ ಭಟ್ ಅವರು ಎಸ್‌ಯುವಿ ಸೆಲ್ಟೋಸ್‌ ಅನಾವರಣಗೊಳಿಸಿದರು –ಪಿಟಿಐ ಚಿತ್ರ   

ಗುರುಗ್ರಾಮ: ದಕ್ಷಿಣ ಕೊರಿಯಾದ ಕಿಯಾ ಮೋಟರ್ಸ್‌, ಭಾರತದ ಮಾರುಕಟ್ಟೆಗೆ ಹೊಸ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಸೆಲ್ಟೋಸ್ ಪರಿಚಯಿಸಿದೆ.

ಮುಂದಿನ 2 ವರ್ಷಗಳಲ್ಲಿ ಇನ್ನೂ ನಾಲ್ಕು ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಭಾರತದ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ‘ಎಸ್‌ಯುವಿ’ ವಿನ್ಯಾಸಗೊಳಿಸಲಾಗಿದೆ. ಇದರ ಬೆಲೆ ₹11 ಲಕ್ಷದಿಂದ ₹ 17 ಲಕ್ಷದವರೆಗೆ ಇರುವ ನಿರೀಕ್ಷೆ ಇದೆ.

ADVERTISEMENT

ಆಂಧ್ರಪ್ರದೇಶದ ಅನಂತಪುರದಲ್ಲಿನ ತಯಾರಿಕಾ ಘಟಕದಿಂದ ಮಧ್ಯಪ್ರಾಚ್ಯ, ಆಫ್ರಿಕಾ, ಲ್ಯಾಟಿನ್‌ ಅಮೆರಿಕ ಮತ್ತು ಏಷ್ಯಾದ ಬೇರೆ ದೇಶಗಳಿಗೂ ರಫ್ತು ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.